ಕೊಪ್ಪಳ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶದಲ್ಲಿ ಉತ್ತಮ ಬಜೆಟ್ ಕೊಟ್ಟ ರಾಜಕಾರಣಿ. ಅವರಿಗೆ ಎಲ್ಲಾ ತಿಳುವಳಿಕೆ ಇದೆ ಎಂದು ಶಾಸಕ ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸದ ಬಳಿಕ ಗ್ಯಾರಂಟಿ ಯೋಜನೆ ಜಾರಿಯಾಗುತ್ತೆ ಅಂದುಕೊಂಡಿದ್ದೆವು. ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ಜೂನ್ 1 ರಂದು ಉಚಿತ ಗ್ಯಾರಂಟಿ ಜಾರಿಗೆ ಆಗುತ್ತೆ ಅಂತಾ ಹೇಲಿದ್ದರು. ಇದೀಗ ಗ್ಯಾರಂಟಿ ಯೋಜನೆ ಜಾರಿ ಮಾಡಲು ಮುಂದೂಡಲಾಗುತ್ತಿದೆ. ಸಿಎಂ ಸಭೆ ಮೇಲೆ ಸಭೆ ಮಾಡ್ತಾ ಇದ್ದಾರೆ. ಇನ್ನೂ ಬಹಳಷ್ಟು ತೊಂದರೆಗಳಿವೆ. ನಾವು ಕಾದು ನೋಡುತ್ತೇವೆ. ಅದು ಹೇಗೆ ಜಾರಿ ಮಾಡ್ತಾರೆ ಅಂತಾ ನೋಡ್ತೇವೆ ಎಂದು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.
ಇದನ್ನೂ ಓದಿ : ಕೆಲಸ ಮಾಡುವವರಷ್ಟೇ ಬೇಕು, ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ : ಕುಮಾರಸ್ವಾಮಿ
ಕೊಟ್ಟ ಮಾತು ಉಳಿಸಿಕೊಳ್ತಾರೆ
ಸಿದ್ದರಾಮಯ್ಯನವರು ದೇಶದಲ್ಲಿ ಉತ್ತಮ ಬಜೆಟ್ ಕೊಟ್ಟ ರಾಜಕಾರಣಿ. ಅವರಿಗೆ ಎಲ್ಲಾ ತಿಳುವಳಿಕೆ ಇದೆ. ಅವರು ರಾಜ್ಯದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಕೊಡ್ತಿನಿ ಅಂತಾ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಸಮಯ ಕೊಡೋಣ. ಆಮೇಲೆ ಗ್ಯಾರಂಟಿ ಯೋಜನೆ ಬಗ್ಗೆ ಪ್ರತಿಕ್ರಿಯೆ ಕೊಡ್ತೀನಿ. ಕೊಟ್ಟ ಮಾತು ಉಳಿಸಿಕೊಳ್ತಾರೆ ಅನ್ನೋದನ್ನು ನಾನು ಕಾದು ನೋಡ್ತೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಅಕ್ಕಿಯನ್ನು ಪೂರೈಕೆ ಮಾಡುವ ಶಕ್ತಿ ಗಂಗಾವತಿಗೆ ಇದೆ. ಗಂಗಾವತಿಯಿಂದಲೇ ಅಕ್ಕಿ ಖರೀದಿಯನ್ನು ಸರ್ಕಾರ ಮಾಡುತ್ತೆ ಎನ್ನುವ ನಂಬಿಕೆ ಇದೆ. ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಬೇರೆ ರಾಜ್ಯದಿಂದ ಅಕ್ಕಿ ಖರೀದಿ ಮಾಡೋದು ಬೇಡ. ನಮ್ಮ ಗಂಗಾವತಿಯಿಂದಲೇ ಅಕ್ಕಿ ಸಿಗುತ್ತೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.