Wednesday, January 22, 2025

ಚಿಕ್ಕ ವಯಸ್ಸಿನಿಂದಲೂ ಅವನಿಗೆ ‘ರಾಜಕೀಯ ಅಂದ್ರೆ ಹುಚ್ಚು’: ಡಿಕೆಶಿ ಸೋದರತ್ತೆ ಕಮಲಮ್ಮ

ಬೆಂಗಳೂರು : ಚಿಕ್ಕ ವಯಸ್ಸಿನಿಂದಲೂ ಅವನಿಗೆ (ಡಿ.ಕೆ ಶಿವಕುಮಾರ್) ರಾಜಕೀಯ ಅಂದ್ರೆ ಹುಚ್ಚು ಜಾಸ್ತಿ ಇತ್ತು ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸೋದರತ್ತೆ ಕಮಲಮ್ಮ ಹೇಳಿದರು.

ನಾಳೆ ಉಪಮುಖ್ಯಮಂತ್ರಿ ಆಗಿ ಡಿಕೆಶಿ ಪ್ರಮಾಣವಚನ ಹಿನ್ನಲೆ ಪವರ್ ಟಿವಿ ಜೊತೆ ಡಿಕೆಶಿ ಸೋದರತ್ತೆ ಕಮಲಮ್ಮ ಅವರು ಕನಕಪುರದಲ್ಲಿ ಸಂತಸ ಹಂಚಿಕೊಂಡರು.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಈಗ ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಆಗ್ತಾನೆ ಅನ್ನೋ ವಿಶ್ವಾಸ ಇದೆ. ಚಿಕ್ಕ ವಯಸ್ಸಿನಿಂದಲೂ ಅವನಿಗೆ ರಾಜಕೀಯ ಹುಚ್ಚು ಜಾಸ್ತಿ ಎಂದು ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೇಗಿದೆ ತಯಾರಿ? ಯಾರಿಗೆಲ್ಲ ಆಹ್ವಾನ?

ಅವನಿಗೆ ಇಂತದ್ದು ಬೇಕು ಅಂದ್ರೆ ಪಡೆಯಲೇಬೇಕು ಎನ್ನೋ ಹಠ. ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಬೇಸರ ಆಗಿದೆ. ಆದರೆ, ಮುಂದಿನ ದಿನಗಳಲ್ಲಿ ಅವಕಾಶ ಇದೆ‌. ಕ್ಷೇತ್ರದ ಜನರಿಗೆ ಇದೊಂದು ರೀತಿಯ ಹೆಮ್ಮೆಯ ವಿಚಾರ. ಬಾಲ್ಯದಿಂದಲೂ ಅವರನ್ನು ನೋಡಿದ್ದೇನೆ. ಹಿಡಿದ ಕೆಲಸ ಬಿಡದ ಹಾಗೆ ಕೆಲಸ ಮಾಡೋ ಹಠಗಾರ‌. ಮುಂದೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಿ ಎಂದು ಆಶಿಸಿದರು.

ನಾಳೆ ಪ್ರಮಾಣವಚನ ಸಮಾರಂಭ

ನಾಳೆ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES