Friday, May 3, 2024

ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೇಗಿದೆ ತಯಾರಿ..? ಯಾರಿಗೆಲ್ಲ ಆಹ್ವಾನ..?

ಬೆಂಗಳೂರು: ರಾಜ್ಯದಲ್ಲಿ ರಚನೆಯಾಗುವ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮ ಮೇ 20 ರಂದು ನಡೆಯಲಿದ್ದು,ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೌದು, ಆಗಿದ್ದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಅಂದು ಸಮಾರಂಭಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅತಿಗಣ್ಯ ಮತ್ತು ಇತರೆ ಗಣ್ಯವ್ಯಕ್ತಿಗಳು ಕೂಡ ಆಗಮಿಸಲಿದ್ದಾರೆ.

ಹೇಗಿರಲಿದೆ ಪ್ರಮಾಣ ವಚನ ಸ್ಚೀಕಾರ ಸಮಾರಂಭ

  • ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಆರಂಭ- ಗರಿಷ್ಠ ಒಂದೂವರೆ ಗಂಟೆಗಳ ಕಾರ್ಯಕ್ರಮ
  • ರಾಜ್ಯಪಾಲ ಥಾವರ್‌ಚಂದ್ ಗೆಹ್ಲಟ್‌ರಿಂದ ಪ್ರಮಾಣವಚನ ಬೋಧನೆ
  • ಸಿದ್ದು ಹಾಗೂ ಡಿಕೆಶಿ ಕಡೆಯಿಂದ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಆಗಮನ ಸಾಧ್ಯತೆ
  • ಖರ್ಗೆಯಿಂದ ಬಿಜೆಪಿಯೇತರ ಸಿಎಂಗಳಿಗೆ ಹಾಗೂ ಗಣ್ಯರಿಗೆ ಆಹ್ವಾನ
  • ಕಂಠೀರವದಲ್ಲಿ 35 ಸಾವಿರ ಸೀಟುಗಳ ವ್ಯವಸ್ಥೆ ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ವಿಶೇಷ ವ್ಯವಸ್ಥೆ

ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಬಿಹಾರ್‌ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್,ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು, ಪುದಿಚೆರಿ ಸಿಎಂ ಎನ್.ರಂಗಸ್ವಾಮಿ, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರನ್ನು ಆಹ್ವಾನಿಸಲಾಗಿದೆ.

 

RELATED ARTICLES

Related Articles

TRENDING ARTICLES