Monday, November 18, 2024

ಕಾರ್ಕಳ ಕ್ಷೇತ್ರದಲ್ಲಿ ‘ನಕಲಿ ಮತದಾನಕ್ಕೆ ಸಚಿವರಿಂದಲೇ ಕುಮ್ಮಕ್ಕು’

ಬೆಂಗಳೂರು : ನಕಲಿ ಮತದಾನಕ್ಕೆ ಬಿಜೆಪಿ ಹಾಲಿ ಸಚಿವರೇ ಕುಮ್ಮಕ್ಕು ನೀಡಿರುವ ಘಟನೆ ಕಾರ್ಕಳ ಕ್ಷೇತ್ರದಲ್ಲಿ ನಡೆದಿದೆ.

ಇದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರ ಅನಾಚಾರ, ಸೋಲಿನ ಸುಳಿಯಲ್ಲಿರುವ ಭ್ರಷ್ಟ, ಮಾನಗೆಟ್ಟ ಸಚಿವರ ಅಸಂಸ್ಕೃತ ವರ್ತನೆ ಅನಾವರಣ ಮಾಡಿದೆ.

ಆಡಳಿತದಲ್ಲೂ ಭ್ರಷ್ಟಾಚಾರ, ಈಗ ಮತದಾನದಲ್ಲೂ ಸಚಿವ ಸುನೀಲ್ ಕುಮಾರ್ ಭ್ರಷ್ಟಾಚಾರಕ್ಕಿಳಿದಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಸಮಾಜ ಮಂದಿರ ಮತಗಟ್ಟೆ 155 ರಲ್ಲಿ ನಡೆದ ಘಟನೆ ನಡೆದಿದೆ.

ಸೋಲಿನ ಸುಳಿವು ಸಿಗುತ್ತಿದ್ದಂತೆ ಸಚಿವ ಸುನೀಲ್​​ ಕುಮಾರ್​​ ನಕಲಿ ಮತದಾನ ಮಾಡಿಸಿದ್ದಾರೆ. ಸಾವಿರಾರು ಹುಡುಗರಿಂದ ನಕಲಿ ಮತದಾನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಗೆಲುವಿನ ಮುನ್ಸೂಚನೆ ಹಿನ್ನೆಲೆ ಅಪ್ರಾಪ್ತರನ್ನು ಬಳಸಿಕೊಂಡು ನಕಲಿ ಮತದಾನ ಮಾಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಚಾಣಕ್ಯ, ಇಂಡಿಯಾ ಟುಡೇ ಸಮೀಕ್ಷೆ : ಕಾಂಗ್ರೆಸ್ ಪಕ್ಷಕ್ಕೆ ‘ಅಭೂತಪೂರ್ವ ಗೆಲುವು’

ವಿದೇಶದಲ್ಲಿದ್ದ ಸುಹಾಶ್ ಶೆಟ್ಟಿ ಮತವನ್ನು ಧಿರಜ್ ಎಂಬ ಅಪ್ರಾಪ್ತ ಹುಡುಗ ಮತದಾನ ಚಲಾಯಿಸಿದ್ದಾನೆ. ನಕಲಿ‌ ಮತ ಚಲಾಯಿಸಿದ ಹುಡುಗನನ್ನು ಸ್ಥಳೀಯರು ಸ್ಥಳದಲ್ಲಿ  ಬಂದಿಸಿದ್ದಾರೆ. ಇದೀಗ ಪೊಲೀಸರು ಮತಗಟ್ಟೆ ಕೊಠಡಿಯಲ್ಲಿ ತನಿಖೆ ಕೂಡ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಶೆಟ್ಟಿ ಭೇಟಿ ನೀಡಿದ್ದಾರೆ.

ಮತಯಂತ್ರ ಕೊಂಡೊಯ್ಯದಂತೆ ಕಾಂಗ್ರೆಸ್ ಕಾರ್ಯಕರ್ತರು ಬಸ್ ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ನಕಲಿ ಮತ ಹಾಕಿದ ಅಪ್ರಾಪ್ತನನ್ನು ಪೊಲೀಸರು ಕದ್ದು ಮುಚ್ಚಿ ಕಳುಹಿಸುತ್ತಿದ್ದರು. ಪೊಲೀಸರ ವರ್ತನೆಯಿಂದ ಕಾಂಗ್ರೆಸ್​​ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

ಸಚಿವರು ತನ್ನ ಕರ್ಮಕಾಂಡದ ಸ್ಟೋರಿ ಬಹಿರಂಗಗೊಳ್ಳುತ್ತಿದ್ದಂತೆ ಪವರ್ ಕಟ್ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ವಿದ್ಯುತ್ ಕಟ್ ಮಾಡಿಸಿದ್ದಾರೆ. ತನ್ನ ಬಂಡವಾಳ ಬಯಲಾಗುವ ಭೀತಿಯಿಂದ ನಿರ್ಲಜ್ಜ, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಕತ್ತಲಿನಲ್ಲೂ ಹಠ ಬಿಡದೆ ಕಾರ್ಯಕರ್ತರು ಮತ ಕೇಂದ್ರದ ಬಳಿ ಜಮಾಯಿಸಿದ್ದಾರೆ.

RELATED ARTICLES

Related Articles

TRENDING ARTICLES