Monday, December 23, 2024

ಪ್ರಧಾನಿ ಮೋದಿ ರೋಡ್ ಶೋ ಆರಂಭ : ಇಂದು ‘ವಿಷಕಂಠ’ನ ಸನ್ನಿಧಿಗೆ ನಮೋ

ಬೆಂಗಳೂರು : ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೆಗಾ ರೋಡ್ ಶೋ ಆರಂಭವಾಗಿದೆ. ಮೋದಿ ನೋಡಲು ನೆರೆದಿರುವ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂವಿನ ಸುರಿಮಳೆಗೈಯುತ್ತಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಷ್ಟೇ 26 ಕಿಲೋ ಮೀಟರ್​​​ ದೂರದ ಮೆಗಾ ರೋಡ್​ ನಡೆಸಿದ್ದ ಪ್ರಧಾನಿ ಮೋದಿ, ಇಂದು ಮತ್ತೊಂದು ಸುತ್ತಿನ ರೋಡ್​ ಶೋ ನಡೆಸಿದ್ದಾರೆ. ಇದಕ್ಕೂ ಮುನ್ನ ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಪ್ರಧಾನಿ ಮೋದಿ ಅವರು ನ್ಯೂ ತಿಪ್ಪಸಂದ್ರ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ ಬರೊಬ್ಬರಿ 6.5 ಕಿ.ಮೀ ಉದ್ದದ ರೋಡ್ ಶೋ ನಡೆಸಲಿದ್ದಾರೆ. ನ್ಯೂ ತಿಪ್ಪಸಂದ್ರ ರಸ್ತೆಯ ಕೆಂಪೇಗೌಡ ಪ್ರತಿಮೆ ನಮನ ಸಲ್ಲಿಸಿ ಈಗಾಗಲೇ ರೋಡ್ ಶೋ ಆರಂಭಿಸಿದ್ದಾರೆ. ಬಳಿಕ ಹೆಚ್​ಎಎಲ್ 2ನೇ ಹಂತ, 80 ಅಡಿ ರಸ್ತೆಯ ಜಂಕ್ಷನ್, ಹೆಚ್​ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದೆ. ಬೆಳಿಗ್ಗೆ 10 ರಿಂದ 11.30ರವರೆಗೆ ರೋಡ್ ಶೋ ನಡೆಯಲಿದೆ.

ರೋಡ್​ ಶೋಗೆ ಭಾರಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಭದ್ರತೆಗೆ ಒಟ್ಟು ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರಿ ವಿಶೇಷ ಆಯುಕ್ತ ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಂಟಿ ಆಯುಕ್ತರಾದ ಡಾ. ಶರಣಪ್ಪ, ಅನುಚೇತ್, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿತ್ತು.

ಇಪತ್ತು ಮಂದಿ ಎಸಿಪಿ ಹಾಗೂ 60 ಇನ್​ಸ್ಪೆಕ್ಟರ್​ಗಳು ಸೇರಿ ಒಟ್ಟು ಎರಡು ಸಾವಿರ ಪೊಲೀಸ್​ ಸಿಬ್ಬಂದಿ ಪ್ರಧಾನಿ ಮೋದಿ ರಕ್ಷಣೆಗೆ ಸರ್ಪಗಾವಲಾಗಿ ಇದ್ದಾರೆ.

ಇದನ್ನೂ ಓದಿ : ಮೋದಿ ರೋಡ್ ಶೋನಿಂದ ಬಿಜೆಪಿಗೆ ಹೊಸ ಚೈತನ್ಯ : ಸಚಿವ ಅಶ್ವತ್ಥನಾರಾಯಣ

‘ವಿಷಕಂಠ ಸನ್ನಿಧಿಗೆ ಮೋದಿ

ರೋಡ್ ಶೋ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೈಸೂರಿನತ್ತ ಮುಖ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೈಸೂರು ಜಿಲ್ಲೆಯ ಹಾಗೂ ಚಾಮರಾಜನಗರ ಜಿಲ್ಲೆಯ ಮತ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ಬೃಹತ್ ಚುನಾವಣಾ ಪ್ರಚಾರದ ಸಭೆಯನ್ನು ದಕ್ಷಿಣ ಕಾಶಿ ಅಂತಲೇ ಹೆಸರುವಾಸಿಯಾಗಿರುವ ವಿಷಕಂಠನ ನೆಲೆಬೀಡು ನಂಜನಗೂಡಿನಲ್ಲಿ ಆಯೋಜನೆ ಮಾಡಲಾಗಿದೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇಂದು ನಮೋ ಕೇವಲ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿಲ್ಲ. ಬದಲಿಗೆ ನಂಜನಗೂಡು ನಂಜುಂಡನ ದರ್ಶನ ಪಡೆದು ಪೂಜೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷದ ಹಾವಿಗೆ ಹೋಲಿಸಿದ್ದರು. ಇನ್ನು ನಂಜನಗೂಡಿನ ನಂಜುಂಡ ಅಂದ್ರೆ, ಆತ ವಿಷಕಂಠ ನಂಜನ್ನು ನುಂಗಿ ಇಡೀ ಜಗತ್ತನ್ನ ರಕ್ಷಿಸಿದವ ನಂಜುಂಡೇಶ್ವರ. ಹೀಗಾಗಿ, ಮೋದಿ ಈ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES