Saturday, November 2, 2024

ಬಿಜೆಪಿಯ 40% ‘ಭ್ರಷ್ಟಾಸುರ’ನನ್ನು ಬೆಂಕಿಯಿಟ್ಟು ಸುಟ್ಟಿದ್ದೇವೆ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಬಿಜೆಪಿಯ 40% ‘ಭ್ರಷ್ಟಾಸುರ’ನನ್ನು ನಾವಿಂದು ಬೆಂಕಿಯಿಟ್ಟು ಸುಟ್ಟಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೇ 10ರಂದು ನಾಡಿನ ಮತದಾರರು ಅಸ್ಥಿ ವಿಸರ್ಜನೆ ಮಾಡುತ್ತಾರೆ. ಮೇ 13ರಂದು ರಾಜ್ಯವು ‘ಭ್ರಷ್ಟಾಸುರ’ರಿಂದ ಸಂಪೂರ್ಣ ವಿಮೋಚನೆ ಪಡೆಯಲಿದೆ. ಸಮೃದ್ಧ, ಸಶಕ್ತ, ಸ್ವಾಭಿಮಾನಿ ಕರ್ನಾಟಕ ಮತ್ತೆ ಪ್ರಜ್ವಲಿಸಲಿದೆ ಎಂದು ಹೇಳಿದ್ದಾರೆ.

ನಮ್ಮ ಗ್ಯಾರಂಟಿಯನ್ನು ಪ್ರಧಾನಿ ಮೋದಿಯವರು ಟೀಕೆ ಮಾಡುತ್ತಾರೆ. ನೀವು ಎಷ್ಟು ಭರವಸೆ ಕೊಟ್ಟಿದ್ರಿ ಅದರಲ್ಲಿ ನೀವೆಷ್ಟು ಈಡೇರಿಸಿದ್ದೀರಿ ಹೇಳಿ ಅಂತಾ ಪ್ರಧಾನಿ ಮೋದಿಯವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದಾರೆ.

ಸಿಎಂಗೆ ಚರ್ಚೆಗೆ ಬರೋಕೆ ಆಗಲ್ಲ

ನಾನು ಬಹಿರಂಗ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಯಿನ್ನು ಕರೆದೆ. ಇದಕ್ಕೆ ಬೊಮ್ಮಯಿ ಪ್ರತಿಕ್ರಿಯೆ ಕೊಡಲ್ಲ. ಚರ್ಚೆಗೆ ಬರೋಕೆ ಇವರ ಕೈಲಿ ಆಗಲ್ಲ. ಈವರೆಗೆ ಮೇಕೆದಾಟು ಯೋಜನೆಗೆ ಡಬಲ್ ಇಂಜಿನ್ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ. ಡಿಪಿಆರ್ ಕಳಿಸಿ ವರ್ಷಗಳೇ ಕಳೆದಿವೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ‘ಜೈ ಬಜರಂಗಬಲಿ’ ಎಂದು ಹೇಳಿದರೆ ಕಾಂಗ್ರೆಸ್ ಅಲ್ಲಾಡುತ್ತೆ : ಪ್ರಧಾನಿ ಮೋದಿ

ದೇಶ ದಿವಾಳಿ ಮಾಡಿರೋರು ಯಾರು?

ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕೆ ಜನ ತೀರಚಮಾನ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಪಕ್ಷ. ಕೊಟ್ಟ ಭರವಸೆಗಳನ್ನು ಈಡೇರಿಸಿರುವ ಪಕ್ಷ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಅದು ಎಪ್ಪತ್ತು ವರ್ಷಗಳಿಂದ ನರೇಂದ್ರ ಮೋದಿ ಮಾಡಿರುವ ಸಾಲ 155 ಲಕ್ಷ ಕೋಟಿ. ದೇಶ ದಿವಾಳಿ ಮಾಡಿರೋರು ಯಾರು? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ 2 ಲಕ್ಷ 42 ಸಾವಿರ ಕೋಟಿ. ಅದು ಕೆ.ಸಿ ರೆಡ್ಡಿಯವರ ಕಾಲದಿಂದ ಬಂದಿರುವ ಸಾಲ. ಈಗ ಬಿಜೆಪಿಯವ್ರೇ ಹೇಳಿರುವ ಪ್ರಕಾರ. ಈ ಬಜೆಟ್‌ನಲ್ಲಿ ಲಕ್ಕ ಕೊಟ್ಟಿರುವ ಪ್ರಕಾರ 5 ಲಕ್ಷ 64 ಸಾವಿರ ಕೋಟಿ ಇದೆ. 5 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲವಾಗಿದೆ. ಯಾರು ರಾಜ್ಯವನ್ನ ದಿವಾಳಿ ಮಾಡಿರೋರು‌?ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES