ಬೆಂಗಳೂರು : ಹಿಂದೂ ಧರ್ಮದಲ್ಲಿ ಗ್ರಹಣಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ(2023) ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣ ಸಂಭವಿಸಲಿವೆ. ಈಗಾಗಲೇ ಮೊದಲ ಸೂರ್ಯಗ್ರಹಣ ಆಗಿದ್ದು, 2023ರ ಮೊದಲ ಚಂದ್ರಗ್ರಹಣ ಇದೆ ಮೇ 5ರಂದು ಸಂಭವಿಸಲಿದೆ.
ಬುದ್ಧ ಪೂರ್ಣಿಮೆಯಂದು ಸಂಭವಿಸುತ್ತಿರುವ ಚಂದ್ರಗ್ರಹಣದ ಪ್ರಭಾವ, ಯಾವ ಸಮಯದಲ್ಲಿ ಸಂಭವಿಸುತ್ತದೆ ಎಂಬುದರ ಕುರಿತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಅವರು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.
ವರ್ಷದ ಮೊದಲ ಚಂದ್ರಗ್ರಹಣಕ್ಕೆ ಕೆಲವೇ ದಿನಗಳು ಬಾಕಿ ಇದೆ. ಬುದ್ಧ ಪೂರ್ಣಿಮೆಯಂದು ಕೂರ್ಮ ಜಯಂತಿಯು ಮತ್ತು ಬುದ್ಧ ದೇವನ ಅವತಾರ ಹಾಗೂ ಜ್ಞಾನವನ್ನು ಪಡೆದನೆಂದು ಶಾಸ್ತ್ರಗಳು ತಿಳಿಸುತ್ತವೆ. ಇಂತಹ ಮಹಾನ್ ಶುಭ ದಿನದಂದು ಚಂದ್ರ ದೇವರಿಗೆ ಛಾಯಕಲ್ಪ ಚಂದ್ರಗ್ರಹಣ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶ್ರೀ ದೇವಿ ಛಿನ್ನಾಮಸ್ತ ಜಯಂತಿ : ದೇವಿ ಆರಾಧನಾ ವಿಧಾನ, ಫಲಗಳ ಬಗ್ಗೆ ಇಲ್ಲಿದೆ ಮಾಹಿತಿ
ಚಂದ್ರಗ್ರಹಣ ಪ್ರಭಾವಗಳು
ಕಲಾವಿದರೇ ಎಚ್ಚರ, ಇವರಿಗೆಲ್ಲಾ ತುಂಬಾ ನಷ್ಟ
ರಾಜಕೀಯ ನಾಯಕರೇ ಧರ್ಮ, ಧಾರ್ಮಿಕ ವಿಚಾರಗಳ ಬಗ್ಗೆ ತಲೆ ಹಾಕದಿರಿ
ಈ ರಾಶಿಯವರಿಗೆ ಎಚ್ಚರದಿಂದಿರಿ..!
ಇನ್ನೂ ಚಂದ್ರಗ್ರಹಣದ ಪ್ರಭಾವದಿಂದ ತುಲಾ, ವೃಶ್ಚಿಕ, ಕನ್ಯಾ, ಮಕರ, ಕುಂಭ, ವೃಷಭ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಈ ಪ್ರಭಾವ ಮೂರು ತಿಂಗಳ ಕಾಲ ಇರುತ್ತದೆ. ಗ್ರಹಣದ ಸಮಯದಲ್ಲಿ ಶುಚಿರ್ಭೂತರಾಗಿ ಗುರುಗಳ ಆಶೀರ್ವಾದ ಪಡೆದು ಅನೇಕ ಮಂತ್ರಗಳನ್ನು ಸಾಧಕರು ಸಿದ್ಧಿಮಾಡಿಕೊಳ್ಳಿ. ದಾನ ಧರ್ಮಗಳನ್ನು ಮಾಡಿ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(Siddalinga Shivacharya Shree) ಅವರು ಹೇಳಿದ್ದಾರೆ.