Wednesday, January 22, 2025

ಮುರುಗೇಶ್ ನಿರಾಣಿ ಭಾವ ಚಿತ್ರವಿರುವ ಬೆಳ್ಳಿ ದೀಪಗಳು ಸೀಜ್​

ಬಾಗಲಕೋಟೆ : ರಾಜ್ಯ ವಿಧಾನ ಚುನಾವಣೆ ಹತ್ತಿರವಾದಂತೆ ಚುನಾವಣಾ ಅಖಾಂಡದಲ್ಲಿ ಗಿಫ್ಟ್ ರಾಜಕೀಯ ಶುರುವಾಗಿದೆ. ಹೌದು, ರಾಜಕೀಯ ಪಕ್ಷಗಳ ಮುಖಂಡರು ಭರ್ಜರಿ ಗಿಫ್ಟಿನ ಆಮಿಷವೊಡ್ಡುವ ಮೂಲಕ ಮತದಾರರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ.

ಹೌದು, ಡಿನ್ನರ್ ಸೆಟ್, ಪ್ರೆಶರ್ ಕುಕ್ಕರ್, ಡಿಜಿಟಲ್ ಗಡಿಯಾರ ಬೆಳ್ಳಿ ದೀಪಗಳು ಹಾಗೂ ಮತದಾರನ್ನು ಆಂಧ್ರ ಪ್ರದೇಶದ ತಿರುಪತಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ಮಹಾರಾಷ್ಟ್ರದ ಶಿರಾಡಿಗೆ ಕರೆದೊಯ್ಯುತ್ತಿದ್ದಾರೆ. ಇತಂಹದೇ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ : ಈಶ್ವರಪ್ಪಗೆ ಮೋದಿ ದೂರವಾಣಿ ಕರೆ : ಯಡಿಯೂರಪ್ಪ ಏನಂದ್ರು?

ಮುರುಗೇಶ ನಿರಾಣಿ ಭಾವಚಿತ್ರವಿರುವ ಬೆಳ್ಳಿ ದೀಪಗಳು ಮುಧೋಳ ಪಟ್ಟಣದಲ್ಲಿ ಪತ್ತೆಯಾಗಿವೆ. ಇನ್ನೂ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೆಳ್ಳಿ ದೀಪಗಳನ್ನು  ನಿರಾಣಿ ಫ್ಯಾಕ್ಟರಿಯ ವಸತಿ ಗೃಹಗಳ ಆವರಣದಲ್ಲಿ 10 ಬಾಕ್ಸ್​ನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ  ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

 

 

 

RELATED ARTICLES

Related Articles

TRENDING ARTICLES