Monday, December 23, 2024

ಪ್ರೇಮಿಗಳೇ ಹುಷಾರ್..! : ಕಬ್ಬನ್ ಪಾರ್ಕ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ರೆ ದಂಡಂ.. ದಶಗುಣಂ..!

ಬೆಂಗಳೂರು : ಕಬ್ಬನ್ ಪಾರ್ಕ್ ನತ್ತ ಮುಖ ಮಾಡುವ ಪ್ರೇಮಿಗಳೇ ಮಿಸ್ ಮಾಡ್ದೆ ಈ ಸುದ್ದಿ ಓದಿ. ಪಾರ್ಕ್ ಗೆ ಹೋಗಿ ಕೈ ಕೈ ಹಿಡಿದು ಕೂರಬಹುದು, ಅಸಭ್ಯವಾಗಿ ವರ್ತಿಸಬಹುದು ಅಂದುಕೊಂಡಿದ್ರೆ ಅದು ನಿಮ್ಮ ಭ್ರಮೆ. ಇನ್ನುಮುಂದೆ ಇಂಥ ಕೆಲಸಗಳಿಗೆ ಇಲ್ಲಿ ಚಾನ್ಸೇ ಇಲ್ಲ. ಇದು ಅಚ್ಚರಿಯಾದ್ರೂ ನಿಜ!

ಹೌದು, ಕಬ್ಬನ್ ಪಾರ್ಕ್. ಇದು ಉದ್ಯಾನ ನಗರಿ ಸೌಂದರ್ಯಕ್ಕೆ ಕಳಸವಿದ್ದಂತೆ. ವಾಯು ವಿಹಾರಿಗಳ ಪಾಲಿಗಂತೂ ಇದು ಸ್ವರ್ಗವೇ ಸರಿ. ಆದರೆ, ಇತ್ತೀಚಿನ ದಿನಗಳಲ್ಲಿ ಪಾರ್ಕ್​ನಲ್ಲಿ ಹೆಚ್ಚಾಗಿ ನಡೆಯುತ್ತಿರುವ ಅಸಭ್ಯ ವರ್ತನೆಯಿಂದ ಕುಟುಂಬದೊಂದಿಗೆ ಬರುವವರಿಗೆ ಮುಜುಗರ ಉಂಟಾಗುತ್ತಿತ್ತು. ಹೀಗಾಗಿ, ತೋಟಗಾರಿಕ ಇಲಾಖೆ ಪ್ರೇಮಿಗಳಿಗೆ ಶಾಕ್ ಕೊಟ್ಟಿದೆ.

ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅದರಂತೆ, ಇನ್ಮುಂದೆ ಕಬ್ಬನ್ ಪಾರ್ಕ್ ಅಲ್ಲಿ ಲವರ್ಸ್ ಒಟ್ಟಿಗೆ ಕೂರಂಗಿಲ್ಲ. ಅಸಭ್ಯ ವರ್ತನೆಗಂತೂ ಅವಕಾಶ ಇಲ್ಲವೇ ಇಲ್ಲ. ಕಬ್ಬನ್ ಪಾರ್ಕ್ ನಲ್ಲಿ ಅನಧಿಕೃತ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣು ಇಡಲಿದ್ದಾರೆ. ಈ ಕುರಿತು ಇದನ್ನು ತಪ್ಪಿಸಲು ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಕಬ್ಬನ್ ಪಾರ್ಕ್​ನಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ

ದಂಡಂ ದಶಗುಣಂ ಪ್ರಯೋಗ

ಮೈಕ್ ಗಳಲ್ಲಿ ಕೂಗಿ ಹೇಳುವ ಮೂಲಕ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗುತ್ತದೆ. ಪಾರ್ಕ್ ಸುತ್ತ ಮುತ್ತ ಗಸ್ತು ತಿರುಗುತ್ತಾ ತೋಟಗಾರಿಕೆ ಇಲಾಖೆ ಕಟ್ಟೆಚ್ಚರ ವಹಿಸುತ್ತಿದೆ. ಮೊದಲ ಸಲ ಮೈಕ್ ನಲ್ಲಿ ಸಿಬ್ಬಂದಿಯಿಂದ ಎಚ್ಚರಿಕೆ ಕೊಡಲಾಗುತ್ತದೆ. ಮತ್ತೆ ಮತ್ತೆ ಒಟ್ಟಿಗೆ ಕೂತರೇ ದಂಡಂ ದಶಗುಣಂ ಪ್ರಯೋಗ ಮಾಡಲು ತೀರ್ಮಾನ ಮಾಡಲಾಗಿದೆ.

ವೃದ್ಧರು, ಮಹಿಳೆಯರು ಓಡಾಡಲು ಮುಜುಗರ

ಮರಗಿಡಗಳ ಸಂಧಿಯಲ್ಲಿ ಕುಳಿತು ಕೊಳ್ಳುವುದು, ವೃದ್ಧರು ಮಹಿಳೆಯರು ಓಡಾಡಲು ಮುಜುಗರ ತರಿಸುವಂತಹ ಚಟುವಟಿಕೆ ಮಾಡೋದು, ಕಬ್ಬನ್ ಪಾರ್ಕ್ ಅಲ್ಲಿ ಕಸ ಬಿಸಾಕುವುದು, ಸೌಂದರ್ಯಕ್ಕೆ ಧಕ್ಕೆ ತರುವಂತಹ ಅನೇಕ ಕೆಲಸ ಇಲ್ಲಿ ನಡೆಯುತ್ತಲೇ ಇದೆ.

ಈಗಾಗಲೇ ಸೆಕ್ಯುರಿಟಿ ಮೈಕ್ ಮೂಲಕ ಅನೌನ್ಸ್ ಮಾಡ್ತಿದ್ದು, ಯಾರು ಜೊತೆಗೆ ಕೂರುವ ಹಾಗಿಲ್ಲ, ಅಂತ ಎಚ್ಚರಿಕೆ ಕೊಡ್ತಾಯಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಕೂಡ ದಂಡ ಪ್ರಯೋಗ ವಿಚಾರದಲ್ಲಿ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಸರ್ಕಾರ ದಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ರೆ ಇನ್ನೂ ಕಠಿಣ ಕ್ರಮ ಜಾರಿಯಾಗುವ ಸಾಧ್ಯತೆಯಿದೆ.

  • ಸುಶ್ಮಿತಾ ಪೂಜಾರಿ, ಪವರ್ ಟಿವಿ.

RELATED ARTICLES

Related Articles

TRENDING ARTICLES