Tuesday, November 12, 2024

KMFಗೆ ಸೆಡ್ಡು ಹೊಡೆಯುತ್ತಾ Amul? : ತಿಳಿಯಲೇಬೇಕು ‘ಕೆಎಂಎಫ್-ಅಮುಲ್ ಬಲಾಬಲ

ಬೆಂಗಳೂರು : ನಂದಿನಿ ರಾಜ್ಯದ ಜನರ ಜೀವನಾಡಿ. ಕನ್ನಡಿಗರ ಬ್ರ್ಯಾಂಡ್ ಹಾಗೂ ಕನ್ನಡಿಗರ ಮನೆ-ಮೆನೆಯ ಜೀವ. ಬಿಜೆಪಿ ಸರ್ಕಾರ ಈ ಜೀವನಾಡಿಯ ಜೀವ ತೆಗೆಯಲು ಪಣತೊಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಹೌದು, ರಾಜ್ಯದ ಹೆಮ್ಮೆಯ ಬ್ರ್ಯಾಂಡ್​ಗೆ ಸೆಡ್ಡು ಹೊಡೆಯೋಕೆ ಖಾಸಗಿ ಬ್ರ್ಯಾಂಡ್​ವೊಂದು ಸದ್ದಿಲ್ಲದೇ ಸಜ್ಜಾಗುತ್ತಿದೆ. ಬೆಂಗಳೂರಲ್ಲಿ ಮನೆ ಮನೆಗೆ ಸೇವೆ ನೀಡಲು ಸಜ್ಜಾಗಿರೋ ಅಮುಲ್​ ವಿರುದ್ಧ ಕನ್ನಡಿಗರು ಸಮರ ಸಾರಿದ್ದಾರೆ.

ಕರುನಾಡ ಹೆಮ್ಮೆಯ ಬ್ರ್ಯಾಂಡ್​ ಉಳಿವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳು ಬಿಜೆಪಿ ಸರ್ಕಾರ ಹಾಗೂ ಕೇಂದ್ರ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಹಾಗಿದ್ರೆ, ಕೆಎಂಎಫ್ ಹಾಗೂ ಅಮುಲ್ ನಡುವಿನ ವ್ಯತ್ಯಾಸ ಏನು? ವಹಿವಾಟು, ಮಾರಾಟ ಎಷ್ಟು ಅನ್ನೋದನ್ನು ನಾವು ತಿಳಿಯಬೇಕು.

ಇದನ್ನೂ ಓದಿ: ನಂದಿನಿ ಬ್ರ್ಯಾಂಡ್ ಉಳಿಸಲು ಟ್ವಿಟರ್​ನಲ್ಲಿ ಕನ್ನಡಿಗರಿಂದ ಸೇವ್‌ ನಂದಿನಿ ಅಭಿಯಾನ

ಅಮುಲ್​ ಬಲಾಬಲವೇನು?

ಅಮುಲ್ 10 ಸಾವಿರ ಡೀಲರ್ಸ್

10 ಲಕ್ಷ ರೀಟೇಲ್ ಮಾರಾಟಗಾರರ ನೆಟ್​ವರ್ಕ್

ಕೆಎಂಎಫ್​ ಬಲಾಬಲವೇನು?

ಕೆಎಂಎಫ್ 1,800 ನಂದಿನಿ ಪಾರ್ಲರ್​ಗಳು

14 ಸಾವಿರ ಸೇಲ್ಸ್ ಏಜೆಂಟ್​​ಗಳು

ವಾರ್ಷಿಕ ವಹಿವಾಟು

ಅಮುಲ್ : 60 ಸಾವಿರ ಕೋಟಿ

ಕೆಎಂಎಫ್: 20 ಸಾವಿರ ಕೋಟಿ

ನಿತ್ಯ ಹಾಲಿನ ಮಾರಾಟ

ಅಮುಲ್: 2.63 ಕೋಟಿ ಲೀಟರ್

ಕೆಎಂಎಫ್: 75-80 ಲಕ್ಷ ಲೀಟರ್

RELATED ARTICLES

Related Articles

TRENDING ARTICLES