Friday, March 29, 2024

ನಂದಿನಿ ಬ್ರ್ಯಾಂಡ್ ಉಳಿಸಲು ಟ್ವಿಟರ್​ನಲ್ಲಿ ಕನ್ನಡಿಗರಿಂದ ಸೇವ್‌ ನಂದಿನಿ ಅಭಿಯಾನ

ಬೆಂಗಳೂರು : ಕನ್ನಡಿಗರ ಅಸ್ಮಿತೆಯಾಗಿರುವ ನಂದಿನಿ (Nandini) ಬ್ರಾಂಡಿಗೆ ಸೆಡ್ಡು ಹೊಡೆಯಲು ಅಮುಲ್​ (Amul) ಸಂಸ್ಥೆ ತನ್ನ ಸೇವೆಯನ್ನು ಆನ್​ಲೈನ್ ಮೂಲಕ ಹಾಲು ಮೊಸರು ಮಾರಾಟ ಆರಂಭಿಸಲು ಮುಂದಾಗಿರುವುದಕ್ಕೆ  ‘ಅಮುಲ್’ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ : ಬೊಮ್ಮಾಯಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ : ಡಿ.ಕೆ ಶಿವಕುಮಾರ್

ಹೌದು, KMF  ನಂದಿನಿ ಹಾಲಿನ (Nandini Milk) ಬ್ರ್ಯಾಂಡ್​ನ ಹಾಲಿನ ಉತ್ಪನ್ನ ಮೇಲೆ ರಾಜ್ಯದ ಜನತೆಗೆ ವಿಶೇಷ ಬಾಂಧವ್ಯವಿದೆ. ಕರ್ನಾಟಕದ ಮನೆ ಮನೆ ಮಾತಾಗಿರುವ ನಂದಿನಿ ಬ್ರ್ಯಾಂಡ್​ಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಗುಜಾರತ್ ಮೂಲದ ಅಮುಲ್ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಮನೆ ಮನೆಗೆ ಹಾಲು ಮೊಸರು ಪೂರೈಕೆ ಮಾಡಲಉ ಸಜ್ಜಾಗಿರುವ ಅಮುಲ್ ಮೇಲೆ ಕನ್ನಡಿಗರು ಸಮರ ಸಾರಿದ್ದಾರೆ.

#SaveNandhini ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿ ಅಭಿಯಾನ

ರಾಜ್ಯ ರಾಜಧಾನಿಯಲ್ಲಿ ಮನೆ ಮನೆಗೆ  ಹಾಲು ಮೊಸರು ಪೂರೈಕೆ ಮಾಡಲು ಸದ್ದಿಲ್ಲದೇ ತಯಾರಿ ನಡೆಸಿದೆ. ಈ ವಿಷಯ ತಿಳಿದಂತೆ ಅಮುಲ್ ವಿರುದ್ಧ ಸಿಡಿದೆದ್ದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ #save Nandini ಅಭಿಯಾನ ಆರಂಭಿಸಿ ಸಮರ ಸಾರಿದ್ದಾರೆ.

 

ನಂದಿನಿ ಉಳಿಸಿ ಅಮುಲ್‌ ತೊಲಗಿಸಿ ಅಭಿಯಾನ

ಅಮುಲ್ ಸಂಸ್ಥೆ ಟಿಟ್ವರ್​ನಲ್ಲಿ ಪ್ರಕಟಿಸಿರುವ ಮಾಹಿತಿಯನ್ನು ಫೇಸ್​ಬುಕ್  ಮತ್ತು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕನ್ನಡಿಗರು ಈ ನಡೆಗೆ ಆಕ್ಷೇಪ ಹೊರ ಹಾಕುತ್ತಿದ್ದಾರೆ . ಗೋ ಬ್ಯಾಕ್ ಅಮುಲ್ ಅಭಿಯಾನ ಕೂಡ ಆರಂಭಿಸಲು ಮುಂದಾಗುತ್ತಿದ್ಧಾರೆ.

ಪ್ರಧಾನಿ ಮೋದಿ, ಅಮಿತ್ ಶಾರನ್ನ ಟ್ಯಾಗ್ ಮಾಡಿ ಸಿದ್ದು ಪೋಸ್ಟ್

ಇನ್ನೂ ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಕನ್ನಡಿಗರ ಎಲ್ಲಾ ಅಸ್ಮಿತೆಯನ್ನ ಮಾರಿಕೊಳ್ಳತ್ತಿರುವ ಇವರು ಇಂದು ನಮ್ಮ ರೈತರು ನಿರ್ಮಿಸಿರುವ  ನಂದಿನಿ ಬ್ರ್ಯಾಂಡ್​ನ್ನ ಮಾರಿಕೊಳ್ಳಲು ಸಿದ್ದರಿದ್ದಾರೆ ಎಂದು ಮಾಜಿ ಸಿ ಎಂ ಅವರು ತನ್ನ ಖಾತೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮೀತ್​ ಶಾ ರನ್ನ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.

 

ನಂದಿನಿ ಬ್ರ್ಯಾಂಡ್ ರಾಷ್ಟ್ರ ಮಟ್ಟದ ಬ್ರ್ಯಾಂಡ್ : ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ದೇಶದಲ್ಲಿ ನಂದಿನಿ ನಂ.1 ಸ್ಥಾನಕ್ಕೆ ಏರಲಿದೆ.ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ. ಇನ್ನೂಅಮುಲ್ ಬ್ರ್ಯಾಂಡ್ ವಿಚಾರವಾಗಿ ಯಾರೂ ಆತಂಕಪಡಬೇಕಿಲ್ಲ. ನಂದಿನಿ ಉತ್ಪನ್ನಗಳ ವೃದ್ಧಿಗೆ ನಾವು ಇನ್ನೂ ಮತ್ತಷ್ಟು ಶ್ರಮ ವಹಿಸುತ್ತಿದ್ದೇವೆ. ಎಂದು
ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : ‘ನನಗೆ ಕುಸ್ತಿ ಬೇಕು..ಕಣಕ್ಕೆ ಯಾರ್ ಬರ್ತಿರೋ ಬನ್ನಿ..’ : ಸಿಎಂ ಬೊಮ್ಮಾಯಿ ಸವಾಲ್

ಅಮುಲ್‌ನೊಂದಿಗೆ KMF ವಿಲೀನ ವಿವಾದ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಇನ್ನೂ ಐಸ್‌ಕ್ರೀಮ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ  ಅಮುಲ್ ಈಗ ಹಾಲು ಮತ್ತು ಮೊಸರನ್ನೂ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮನೆಗಳಿಗೆ ತಲುಪಿಸಲು ಮುಂದಾಗಿದ್ದಾರೆ.ಈ ಹಿನ್ನಲೆ ಅಮೂಲ್‌ ಬಗ್ಗೆ ಟ್ವಿಟರ್‌ನಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

RELATED ARTICLES

Related Articles

TRENDING ARTICLES