ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಬಹುದು ಎನ್ನಲಾಗಿದೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿದ ಅವರು, ನಾನು ಇನ್ನೂ ಪಟ್ಟಿ ನೋಡಿಲ್ಲ. ಎಲ್ಲಾ ಸರಿ ಹೋಗುತ್ತದೆ. ಕೆಲವು ಕ್ಲಾರಿಫಿಕೇಶನ್‌ಗಳ ನಂತರ ಟಿಕೆಟ್ ಹಂಚಿಕೆ ಆಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚು ಕಡಿಮೆ 90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೆ ಸಿಗುತ್ತದೆ. ಕೆಲವು ಸಂಧಾನಗಳು ಹಾಗೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಸರಿ ಆಗುತ್ತದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಅಮವಾಸ್ಯೆ ಕಾರಣ ತಡವಾಯಿತು
ಸಿದ್ದರಾಮಯ್ಯ ವರುಣಾದಿಂದ ಟಿಕೆಟ್ ಕೇಳಿದ್ದರು. ಅವರಿಗೆ ವರುಣಾದಿಂದಲೇ ಟಿಕೆಟ್ ಕೊಟ್ಟಿದ್ದಾರೆ. ಅವರು ಕೋಲಾರ ಕೇಳಿದ್ದರೆ ಕೋಲಾರವನ್ನು ಕೊಡುತ್ತಿದ್ದರು. ಮೂರು ನಾಲ್ಕು ದಿನದ ಹಿಂದೆಯೇ ಟಿಕೆಟ್ ಹಂಚಿಕೆ ಆಗಬೇಕಿತ್ತು. ಆದರೆ ಅಮವಾಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತಡವಾಯಿತು ಎಂದು ಹೇಳಿದ್ದಾರೆ.
ಅಮವಾಸ್ಯೆಯಂದು ಸೂರ್ಯ ಬಂದಿದ್ದಾನೆ. ಸಿಂಗಲ್ ನೇಮ್ ಇರುವ 124 ಕ್ಷೇತ್ರಗಳ ಹೆಸರು ಕ್ಲಿಯರ್ ಆಗಿದೆ. ಉಳಿದ ಕೆಲವು ಕಡೆ ಸಿಂಗಲ್ ನೇಮ್ ಇದ್ದರೂ, ಚರ್ಚೆಗಳು ನಡೆಯಬೇಕಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.