ಬೆಂಗಳೂರು : ದೇಶದಲ್ಲಿ ಕೋವಿಡ್ ವೈರಸ್ ನ ಅಬ್ಬರ ಸೈಲೆಂಟ್ ಆಗಿಯೇ ಏರಿಕೆಯಾಗುತ್ತಿದೆ. ಜೊತೆಯಲ್ಲೇ ಚಿಕಿತ್ಸೆಗಾಗಿ ಚಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಹೌದು, ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ 1,590 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದು ಕಳೆದ 146 ದಿನಗಳಲ್ಲೇ ಒಂದೇ ದಿನಕ್ಕೆ ದಾಖಲಾಗಿರುವ ಗರಿಷ್ಠ ಸಂಖ್ಯೆಯ ಪ್ರಕರಣವಾಗಿದೆ. ಇನ್ನೊಂದೆಡೆ, ಕೊರೊನಾ ಸೋಂಕಿನಿಂದ ಆರು ಮಂದಿ ಮೃತಪಟ್ಟಿದ್ದಾರೆ.
ಒಂದೇ ದಿನ ಆರು ಸಾವು
ಮಹಾರಾಷ್ಟ್ರದ ಮೂವರು, ಕರ್ನಾಟಕ, ರಾಜಸ್ಥಾನ ಹಾಗೂ ಉತ್ತರಾಖಂಡ್ ನಲ್ಲಿ ತಲಾ ಒಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ವೈರಸ್ ನಿಂದ ಮರಣಪಟ್ಟವರ ಸಂಖ್ಯೆ 5,30,824ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿಅಂಶ ಬಹಿರಂಗಪಡಿಸಿದೆ.
ಕಳೆದ ಮಾರ್ಚ್ 21ರಂದು ಒಂದೇ ದಿನ 699 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇ 0.01 ರಷ್ಟಾಗಿತ್ತು. ಜೊತೆಗೆ, ಇಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು.