Monday, December 23, 2024

Wow : 3.4 ಅಡಿ ಎತ್ತರ ಬಾಡಿಬಿಲ್ಡರ್ ಗೆ 4.2 ಅಡಿ ವಧು

ಬೆಂಗಳೂರು : ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿರುವ ವಿಶ್ವದ ಅತ್ಯಂತ ಕುಳ್ಳ ದೇಹದಾರ್ಢ್ಯ ಪಟು ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ, ವಿವಾಹವಾಗಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

2021ರಲ್ಲಿ ವಿಶ್ವದ ಅತ್ಯಂತ ಕುಳ್ಳ ಅಂದರೆ 3 ಅಡಿ 4 ಇಂಚು ಎತ್ತರ ಹೊಂದಿರುವ ಬಾಡಿಬಿಲ್ಡರ್​​​​ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದರು. ಇದೀಗಾ 4 ಅಡಿ 2 ಇಂಚು ಎತ್ತರದ ಜಯಾರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಡೈಲಿ ಮೇಲ್ ವರದಿಯ ಪ್ರಕಾರ , ಪ್ರತೀಕ್ ನಾಲ್ಕು ವರ್ಷಗಳ ಹಿಂದೆ ತನ್ನ ಸಂಗಾತಿ ಜಯಾ ಅವರನ್ನು ಭೇಟಿಯಾಗಿದ್ದರು. ಜಯಾನನ್ನು ನೋಡಿದ ಕ್ಷಣದಲ್ಲೇ ಇಷ್ಟಪಟ್ಟು, ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪತ್ನಿ ಅನಿತಾರನ್ನು ನಾನು ರೇಗಿಸ್ತೀನಿ : ಎಚ್.ಡಿ ಕುಮಾರಸ್ವಾಮಿ

ಇನ್‌ಸ್ಟಾಗ್ರಾಮ್​​ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ರ್​ಗಳನ್ನು ಹೊಂದಿರುವ ಬಾಡಿಬಿಲ್ಡರ್ ಪ್ರತೀಕ್, ಇದೀಗಾ ತನ್ನ ಮದುವೆಯ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES