Thursday, May 30, 2024

ಪತ್ನಿ ಅನಿತಾರನ್ನು ನಾನು ರೇಗಿಸ್ತೀನಿ : ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಬಗೆಗಿನ ಸ್ವಾರಸ್ಯಕರ ವಿಚಾರವನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

ಹೌದು, ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕುಟುಂಬ ಹಾಗೂ ಪತ್ನಿ ಅನಿತಾ ಬಗ್ಗೆ ಮಾತನಾಡಿದ್ದಾರೆ. ನಾನು ಅನಿತಾ ಕುಮಾರಸ್ವಾಮಿ ಜೊತೆಗೆ ರಾಜಕೀಯದ ಬಗ್ಗೆ ಚರ್ಚೆ ಮಾಡಲ್ಲ. ಆದರೆ, ಅನಿತಾ ರಾಜಕೀಯಕ್ಕೆ ಬಂದಮೇಲೆ ಸರಿ-ತಪ್ಪುಗಳ ಬಗ್ಗೆ ಹೇಳುತ್ತಾರೆ. ಆದರೆ, ಆಗ ನಾನು ಪತ್ನಿಯನ್ನು ರೇಗಿಸುತ್ತೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ನನಗೆ ರಾಜಕಾರಣ ಗೊತ್ತಿಲ್ವಾ? ನನಗೆ ಬುದ್ಧಿ ಹೇಳ್ತೀಯಾ? ಎಂದು ರೇಗಿಸುತ್ತೇನೆ. ಅಲ್ಲಿಗೆ ಪತ್ನಿ ಅನಿತಾ ಸೈಲೆಂಟ್ ಆಗುತ್ತಾರೆ. ರಾಜಕೀಯದ ಬಗ್ಗೆ ಅಂತಿಮ ನಿರ್ಣಯ ನಾನೇ ತೆಗೆದುಕೊಳ್ಳುತ್ತೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಹೆಬ್ಬಾಗಿಲು ಶಾಶ್ವತವಾಗಿ ಕ್ಲೋಸ್ ಆಗುತ್ತೆ : ಎಚ್ ಡಿಕೆ ಭವಿಷ್ಯ

ನಿಖಿಲ್ ಒಳ್ಳೆಯ ಪ್ರತಿಭೆ

ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಬೇಡ ಎಂದು ಹೇಳಿದ್ದೆ. ಕೆಲವರ ಒತ್ತಡದಿಂದ ರಾಜಕೀಯ ಪ್ರವೇಶ ಮಾಡಿದ್ದಾನೆ ಎಂದು ಕುಮಾರಸ್ವಾಮಿ ನಿಖಿಲ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಪ್ರತಿಭೆ ಇದೆ. ಚಿತ್ರರಂಗದಲ್ಲೇ ಕೆಲಸ ಮಾಡು ಎಂದು ಸಲಹೆ ನೀಡಿದ್ದೆನು. ಆದರೆ, ಕೆಲವು ಶಾಸಕರು ನಿಖಿಲ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದರು. ಹಾಗಾಗಿ ನಿಖಿಲ್ ರಾಜಕೀಯಕ್ಕೆ ಬಂದರು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ಟ್ರೋಲ್ ಆದ ಕುಮಾರಣ್ಣ

ಆಕೆಯನ್ನು ನಾನು ರೇಗಿಸ್ತೀನಿ ಎಂದಿರುವ ಕುಮಾರಸ್ವಾಮಿ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ‘ಮೊನ್ನೆ ರಾಮನಗರದಲ್ಲಿ ರೇಗಿಸಿದ್ದನ್ನು ಜನರೆಲ್ಲಾ ನೋಡದ್ರು’ ಎಂದರೆ, ಮತ್ತೊಬ್ಬರು, ‘ನೀವಲ್ಲದೆ ನಾವು ರೇಗಿಸೋಕೆ ಆಗುತ್ತಾ? ಎಂದಿದ್ದಾರೆ.

ಇನ್ನೂ ಹಲವರು, ‘ನೀವು ರೇಗಿಸಿದಿರೋ ಅಥವಾ ಅವರೇ ರೇಗಿದರೋ? ನಿಮ್ಮ ಮಾತಿಗೆ ಸಿಟ್ಟಾದ್ರಾ! ಪೋಲಿ ಇವನು..! ಎಂದೆಲ್ಲಾ ಕಾಮೆಂಟ್ ಹರಿಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES