Wednesday, January 22, 2025

ಕನ್ನಡಿಗರಿಂದ ಬಾಲಿವುಡ್ ‘ಕಬ್ಜ’: ಉಪ್ಪಿ ಬಾಯಿಂದ ಕಬ್ಜ-2 ಸ್ಟೋರಿ ಲೀಕ್?

ಬೆಂಗಳೂರು : ಸ್ಯಾಂಡಲ್ ವುಡ್ ಕಬ್ಜ. ಇದು ಕನ್ನಡ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್ ನಲ್ಲೂ ಟಾಕ್ ಆಫ್ ದಿ ಟೌನ್ ಆಗಿದೆ. ಬಿಗ್​ಬಿ ಟ್ರೈಲರ್ ಲಾಂಚ್ ಮಾಡಿದ ಹಿನ್ನೆಲೆ ಟಾಕ್ ಆಫ್ ದಿ ಟೌನ್ ಆಗಿದ್ದ ಕಬ್ಜ ಸಿನಿಮಾ, ಇದೀಗ ಕಂಪ್ಲೀಟ್ ಬಾಲಿವುಡ್​ನ ಕಬ್ಜ ಮಾಡಿಬಿಟ್ಟಿದೆ.

ಹೌದು, ರೀಸೆಂಟ್ ಆಗಿ ನಡೆದ ಮುಂಬೈ ಪ್ರಮೋಷನ್ಸ್​​ನಲ್ಲಿ ಕನ್ನಡಿಗರು ರೋಡ್​ ಶೋನಿಂದ ಧೂಳೆಬ್ಬಿಸಿದ್ದಾರೆ. ಕಿಚ್ಚ, ಉಪ್ಪಿ, ಶ್ರಿಯಾ ಮಾತಿಗೆ ಹಿಂದಿವಾಲಾಗಳು ದಿಲ್​ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ, ರಿಯಲ್ ಸ್ಟಾರ್ ಉಪ್ಪಿ ಬಾಯ್ತಪ್ಪಿನಿಂದ ಕಬ್ಜ-2 ಕಥೆ ಲೀಕ್ ಮಾಡಿದ್ದಾರೆ.

ಮುಂಬೈಗೆ ಉಪೇಂದ್ರ ಹೊಸಬರಿರಬಹುದು. ಆದರೆ, ಅವರ ಸಿನಿಮಾಗಳಲ್ಲಾ. ಅದೇ ರೀತಿ ಸದ್ಯ ಕಬ್ಜ ಟ್ರೈಲರ್ ಮುಂಬೈನ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಅದರಲ್ಲೂ ಕಿಚ್ಚ ಸುದೀಪ್ ಆಲ್ ಇಂಡಿಯಾ ಕಟೌಟ್ ಆಗಿ, ಹಿಂದಿವಾಲಾಗಳಿಗೆ ಮೊದಲೇ ಚಿರಪರಿಚಿತರು. ಹಾಗಾಗಿ ಕಬ್ಜ ಸಿನಿಮಾ ಹಿಂದಿ ಮಂದಿಯ ಕುತೂಹಲ ಹೆಚ್ಚಿಸಿದೆ. ಮೇಕಿಂಗ್​ನಲ್ಲಿ ಧಮ್ ಇದ್ದು, ಪಾತ್ರಗಳಲ್ಲಿ ಜೀವಂತಿಕೆ ಇದ್ರೆ, ಯಾರು ಯಾರ ಬಾಕ್ಸ್ ಆಫೀಸ್​​ನ ಬೇಕಾದ್ರೂ ಆಳಬಹುದು ಅನ್ನೋದಕ್ಕೆ ಇದು ಜ್ವಲಂತ ಸಾಕ್ಷಿ ಆಗಲಿದೆ.

ಕಬ್ಜ ಪ್ರೀ ರಿಲೀಸ್ ಇವೆಂಟ್ ರಂಗು

ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿ ಮುಂಬೈ ಟೌನ್​ಗೆ ಕಾಲಿಟ್ಟಿರೋ ಕಬ್ಜ ಕ್ಯಾಪ್ಟನ್ ಆರ್. ಚಂದ್ರುಗೆ ಅಲ್ಲಿನ ಪ್ರತಿಷ್ಠಿತ ಪ್ರೊಡ್ಯೂಸರ್ ಹಾಗೂ ಡಿಸ್ಟ್ರಿಬ್ಯೂಟರ್ ಆನಂದ್ ಪಂಡಿತ್ ಸಾಥ್ ನೀಡಿದ್ದಾರೆ. ಸೌತ್ ಇಂಡಿಯಾದಲ್ಲಿ ಹೇಗೆ ಭರ್ಜರಿ ಪ್ರಮೋಷನ್ಸ್ ಮಾಡಿದ್ರೋ, ಅದಕ್ಕಿಂತ ಜೋರಾಗಿ ಮುಂಬೈನಲ್ಲಿ ಕಬ್ಜ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಇತ್ತೀಚೆಗೆ (ಗುರುವಾರ) ನಡೆದ ಕಬ್ಜ ಪ್ರೀ ರಿಲೀಸ್ ಇವೆಂಟ್ ಜೋರಾಗಿ ರಂಗೇರಿತು.

ಇದನ್ನೂ ಓದಿ : ಕಬ್ಜದಲ್ಲಿ ರೆಟ್ರೋ ಕಾರ್ಗಳ ಕಲರವ : ಅಬ್ಬಬ್ಬಾ ಎಷ್ಟು ಕೋಟಿ ವೆಚ್ಚ ಮಾಡಿದ್ದಾರೆ ಗೊತ್ತಾ..?

ದುಬಾರಿ ಬೈಕ್​​ಗಳನ್ನ ಏರಿ ಸ್ಪೆಷಲ್ ರೋಡ್ ಶೋ ಮಾಡಿದ ಉಪೇಂದ್ರ, ಶ್ರಿಯಾ ಸರಣ್ ಹಾಗೂ ಕಿಚ್ಚ ಸುದೀಪ್​ಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಮಾಧ್ಯಮಗಳನ್ನು ಫೇಸ್ ಮಾಡೋಕೂ ಮುನ್ನ ಮುಂಬೈನ ಪ್ರಮುಖ ರೋಡ್​​ಗಳಲ್ಲಿ ಕಬ್ಜ ಕಹಳೆ ಮೊಳಗಿಸಿದ್ದಾರೆ. ಅದಕ್ಕೆ ಕೆ.ಪಿ ಶ್ರೀಕಾಂತ್, ನಾಗಿ ಸೇರಿದಂತೆ ಸಾಕಷ್ಟು ಮಂದಿ ಕನ್ನಡದ ನಿರ್ಮಾಪಕರುಗಳು ಸಹ ಜೊತೆಗಿದ್ದು ಬೆನ್ನು ತಟ್ಟಿದ್ದಾರೆ. ಇನ್ನು ಮಾಧ್ಯಮಗಳ ಪ್ರಶ್ನೆಗಳಿಗೆ ಮುಕ್ತವಾಗಿ ಮಾತನಾಡಿದ ಸುದೀಪ್ ಹಾಗೂ ಉಪೇಂದ್ರ, ನಮ್ಮ ಸಿನಿಮಾಗಳ ಗತ್ತು, ಗಮ್ಮತ್ತು ಅರ್ಥೈಸಿದ್ದಾರೆ.

ಉಪ್ಪಿ ಬಾಯಿಂದ ಕಬ್ಜ-2 ಸ್ಟೋರಿ ಲೀಕ್?

ನಟ ಉಪೇಂದ್ರ ಹೇಳಿರುವಂತೆ ಇದೊಂದು ಮೆಗಾ ಮಲ್ಟಿ ಸ್ಟಾರ್ ಮೂವಿ. ಉಪ್ಪಿ ಜೊತೆ ಸುದೀಪ್, ಶಿವರಾಜ್​ಕುಮಾರ್ ಮಾತ್ರ ಇಲ್ಲಿ ಹೀರೋಗಳಲ್ಲ. ಮೂರು ಮಂದಿ ಟೆಕ್ನಿಷಿಯನ್ಸ್ ಅಸಲಿ ಹೀರೋಗಳು. ಕ್ಯಾಮೆರಾಮೆನ್ ಎ.ಜೆ. ಶೆಟ್ಟಿ, ಆರ್ಟ್​ ಡೈರೆಕ್ಟರ್ ಶಿವಕುಮಾರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಕಬ್ಜ ವರ್ಲ್ಡ್​ ಕ್ರಿಯೇಟ್ ಮಾಡೋಕೆ ಹಗಲಿರುಳು ದುಡಿದಿದ್ದಾರೆ.

ವಿಂಟೇಜ್ ಕಾರ್​​​ಗಳ ಝಲಕ್ ರಿವೀಲ್ ಆದ ಬಳಿಕ, ಬೃಹತ್ ಸೆಟ್​​ಗಳ ಮೇಕಿಂಗ್ ಹಿಂದಿನ ರೋಚಕತೆ ಬಯಲಾಗಿದೆ. ಶಿವಕುಮಾರ್ ಅಂಡ್ ಟೀಂ ಸೆಟ್ ಮೇಕಿಂಗ್ ವಿಡಿಯೋ ಝಲಕ್ ನೋಡಿದ್ರೆ ನೀವು ಹುಬ್ಬೇರಿಸುತ್ತೀರಿ. ಕಾರಣ ಬ್ಲ್ಯಾಕ್ ಟಿಂಟ್​ ಬರೋಕೆ ಅವ್ರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸ್ಮೋಕ್​​ನಲ್ಲಿ ರಕ್ತ ಕಾರಿಕೊಂಡು ಸಹ ಎಂಟೆದೆ ಬಂಟರಂತೆ ಕಾರ್ಯ ನಿರ್ವಹಿಸಿದ್ದಾರೆ.

ಕಬ್ಜ-2ನಲ್ಲಿ ಹ್ಯಾಟ್ರಿಕ್ ಹಿರೋ ಶಿವಣ್ಣ

ಕಬ್ಜ ಸಿನಿಮಾ ಜಸ್ಟ್ ಒಂದು ಭಾಗದಲ್ಲಿ ಮುಗಿದು ಹೋಗೋ ಅಧ್ಯಾಯವಲ್ಲ. ಕ್ಲೈಮ್ಯಾಕ್ಸ್​​ನಲ್ಲಿ ಸೀಕ್ವೆಲ್​ಗೆ ಲೀಡ್ ನೀಡಿದ್ದು, ದ್ವಿತಿಯ ಭಾಗದಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ಪ್ರೇಕ್ಷಕರ ಯಕ್ಷ ಪ್ರಶ್ನೆ ಆಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಬಾಯ್ತಪ್ಪಿನಿಂದ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವ್ರೇ ಎರಡನೇ ಭಾಗದಲ್ಲಿ ಶಿವಣ್ಣ ಇರಲಿದ್ದಾರೆ. ಸುದೀಪ್ ಅವ್ರು ಹಾಗೂ ಶಿವಣ್ಣ ಮುಂದುವರೆಸಿಕೊಂಡು ಹೋಗ್ತಾರೆ ಅನಿಸುತ್ತೆ ಅಂದಿದ್ದಾರೆ.

ಲೆಜೆಂಡರಿ ಌಕ್ಟರ್ ಶಿವರಾಜ್​ಕುಮಾರ್​ರನ್ನು ಗುಣಗಾನ ಮಾಡಿದ ಅವರು, ನಂತರ ಕಬ್ಜ-2 ಕಥೆ ಲೀಕ್ ಮಾಡಿರೋದು ಸದ್ಯ ಸಂಚಲನ ಮೂಡಿಸಿದೆ. ಎಲ್ಲೋ ಒಂದು ಕಡೆ ಕಬ್ಜ ಕಥೆ ಲೀಕ್ ಆಗೋಯ್ತಾ ಅನಿಸಿದ್ರೂ, ಮೇಕಿಂಗ್​ನಿಂದ ಸಿನಿಮಾದ ಕ್ರೇಜ್ ಮಾತ್ರ ಹಾಗೇ ಇದೆ. ಅಧಿಕೃತ ಮೂಲಗಳ ಪ್ರಕಾರ ಸುಮಾರು 4 ಸಾವಿರ ಸ್ಕ್ರೀನ್ಸ್​​ನಲ್ಲಿ ವರ್ಲ್ಡ್​ವೈಡ್ ಗ್ರ್ಯಾಂಡ್ ರಿಲೀಸ್ ಆಗಲಿದೆ ಕಬ್ಜ. ಮಾರ್ಚ್​ 17ಕ್ಕೆ ಬಾಕ್ಸ್ ಆಫೀಸ್ ಕಬ್ಜ ಆಗಲಿದ್ದು, ಬಾಲಿವುಡ್ ನಲ್ಲೂ ದೊಡ್ಡ ಮಟ್ಟದ ಮೊತ್ತ ಕಲೆ ಹಾಕುವ ನಿರೀಕ್ಷೆಯಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

RELATED ARTICLES

Related Articles

TRENDING ARTICLES