ಬೆಂಗಳೂರು : ಐಟಿಬಿಟಿ, ಉನ್ನತ ಶಿಕ್ಷಣ, ಕೌಶಾಲ್ಯಾಭಿವೃದ್ದಿ ಇಲಾಖೆಗಳಿಂದ ಸುಶಾಸನ ಮಾಸ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.
ಇನ್ನು, ಡಿಸೆಂಬರ್ ತಿಂಗಳನ್ನು ಗುಡ್ ಗವರ್ನರ್ಸ್ ಆಗಿ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ನಾಳೆ ಈ ಕಾರ್ಯಕ್ರಮ ವನ್ನು ಮುಖ್ಯಮಂತ್ರಿ ಗಳು ಚಾಲನೆ ಕೊಡ್ತಾರೆ. ಏನೇ ಕುಂದುಕೊರತೆಗಳು ಇದ್ರೂ ನಿರ್ವಹಣೆ ಮಾಡಲು ಬೇಕಾದ ವ್ಯವಸ್ಥೆ ಇದಾಗಿದೆ. ಪಾರದರ್ಶಕವಾಗಿ ಮಾಹಿತಿ ಕೊರತೆ ಸರಿಪಡಿಸಲು ಸೂಚಿಸಲು ಕ್ರಮ ಕೈಗೊಳ್ಳಲಾಗಿದೆ.
ಇನ್ನು, ಪಿಂಚಣಿ ಅದಾಲತ್ ಮಾಡುವ ವ್ಯವಸ್ಥೆ ಕೂಡ ಆಗುತ್ತದೆ. ಯಾವುದೇ ಕಡತ ಇದ್ರೂ ಅದನ್ನು ವಿಲೇವಾರಿ ಮಾಡುವ ಕೆಲಸ ಆಗುತ್ತದೆ. ಒಂದು ವರ್ಷದಿಂದ ಯಾವುದೇ ಫೈಲ್ ಇದ್ರೂ, ಈ ಮೂರು ಇಲಾಖೆ ಆಗುತ್ತದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಕೆಲಸ ಕೂಡ ಆಗುತ್ತದೆ. ರಾಜ್ಯದ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹತ್ತು ಪ್ರಶಸ್ತಿ ಕೊಡುವ ಕೆಲಸ ಕೂಡ ಆಗುತ್ತದೆ. ಬೆಸ್ಟ್ ಕಾಲೇಜು, ಬೆಸ್ಟ್ ಪ್ರಾಧ್ಯಾಪಕರು, ಬೆಸ್ಟ್ ವಿದ್ಯಾರ್ಥಿಗಳು, ಬೆಸ್ಟ್ ಸಮಾಜ ಸೇವೆ ಹೀಗೆ ಹಲವು ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಲಾಗುತ್ತದೆ ಎಂದರು.