Friday, May 17, 2024

ಸಿಲಿಕಾನ್ ಸಿಟಿಗೆ ಮತ್ತಷ್ಟು ಹೈಟೆಕ್ ಟಚ್ ಕೊಡಲಿದೆ BMRCL

ಬೆಂಗಳೂರು: ಸಂಚಾರ ದಟ್ಟಣೆಗೆ ಟಾನಿಕ್ ನಂತೆ ಬಂದಿದ್ದು ನಮ್ಮ ಮೆಟ್ರೋ.ಈಗಾಗಲೇ ಮೊದಲ ಹಾಗೂ ಎರಡನೇ ಹಂತದಲ್ಲಿ ಮೆಟ್ರೋ ಕಾಮಗಾರಿ ನಡೆದ್ರೂ ಅದೆಷ್ಟು ರಸ್ತೆಗಳಲ್ಲಿ ಟ್ರಾಫಿಕ್ ಮಾತ್ರ ಕಡಿಮೆ ಆಗಿಲ್ಲ.ಇದೀಗ ಮೂರನೇ ಹಂತದ ಕಾಮಗಾರಿಗೂ ನಿಗಮ ಕೈ ಹಾಕಿದೆ‌. ಜೆಪಿ ನಗರದಿಂದ ಹೆಬ್ಬಾಳ ಹಾಗೂ ನಟಸಾರ್ವಭೌಮ ಡಾ.ರಾಜ್ ಕುಮಾರ್ ಸಮಾಧಿಯಿಂದ ಯಶವಂತಪುರ ನ್ಯೂ ಬಿಇಎಲ್ ಮಾರ್ಗವಾಗಿ ಒಟ್ಟು 44.65 ಕಿಮೀಟರ್ ಮಾರ್ಗದಲ್ಲಿ ಮೆಟ್ರೋ ಓಡಿಸಲು ಸಿದ್ದವಾಗ್ತಿದೆ.ಆದ್ರೆ ಈ ಮಾರ್ಗದ ಕೆಲ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ನಿರ್ಮಿಸಲಿದೆ.

ಹೌದು.ಈಗಾಗಲೇ ಮೆಟ್ರೋ ಎರಡನೇ ಹಂತದ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ.ಇದೇ ಮಾದರಿಯನ್ನು ಮೆಟ್ರೋ ಪೇಸ್ 3 ಮಾರ್ಗದಲ್ಲೂ ಹೆಚ್ಚುವರಿಯಾಗಿ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ.

ನೆಲಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕ್ ಎಂದರೆ ಲಘು ವಾಹನಗಳು ಸಂಚಾರಕ್ಕೆಂದು ರೋಡ್ ತಲೆಯೆತ್ತಲಿದೆ. ಹಾಗೇ ಭಾಗಶಃ ಅಂತರ ನೀಡಿ ಮತ್ತೆ ಅದೇ ಪಿಲ್ಲರ್ ಮೇಲೆ ಮೆಟ್ರೋ ಥರ್ಡ್ ಲೈನ್ ಸಿಸ್ಟಂ ಅಳವಡಿಸಿ ಎಲಿವೇಟೆಡ್ ಟ್ಯ್ರಾಕ್ ಮಾಡಲಾಗುತ್ತದೆ. ಇದರಿಂದ ಒಂದೇ ಖರ್ಚಿನಲ್ಲಿ ರಸ್ತೆ ಮೇಲಿನ ವಾಹನಗಳ ಒತ್ತಡ ನಿಯಂತ್ರಣ ಮಾಡಬಹುದಾಗಿದೆ.ಇದರಿಂದ ಮೂರನೇ ಹಂತದ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಕಂ ರೋಡ್ ಗೆ ಒತ್ತು ನೀಡಲು ನಿಗಮ ಮುಂದಾಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES