Wednesday, January 22, 2025

ಮೂರೇ ದಿನಕ್ಕೆ ಸಿದ್ಧವಾಗುತ್ತಂತೆ ಬಿಬಿಎಂಪಿ ರಸ್ತೆಗಳು..!

ಬೆಂಗಳೂರು : ಈಗೇನಿದ್ರೂ ಫಾಸ್ಟ್ ಯುಗ. ಹೊಟೇಲ್ ಗೆ ಹೋದ್ರೆ ತಕ್ಷಣದಲ್ಲೇ ತಿಂಡಿ ಸಿಗ್ಬೇಕು. ಬಸ್ ಸ್ಟ್ಯಾಂಡ್ ಗೆ ಹೋದ್ರೆ ಬಸ್ ನಮಗಾಗಿ ಕಾಯುತ್ತಿರಬೇಕು. ಅಷ್ಟೇ ಯಾಕೆ.., ಮಾಹಿತಿನೂ ಕೂಡ ಫ್ರಾಕ್ಷನ್ ಆಫ್ ಸೆಕೆಂಡ್ಸ್‌ನಲ್ಲಿ ಸಿಗ್ಬೇಕು ಅಂತ ಯೋಚ್ನೆ ಮಾಡೋ ಮಟ್ಟಕ್ಕೆ ಬಂದಿದ್ದೀವಿ. ಇಷ್ಟೆಲ್ಲಾ ಇರ್ಬೇಕಾದ್ರೆ ಸರ್ಕಾರಿ ಸಂಸ್ಥೆಗಳು ಮಾಡ್ತಿರೋ ಕಾಮಗಾರಿಗಳು ಮಾತ್ರ ಯಾಕೆ ವರ್ಷಗಟ್ಟಲೇ ನಡೆಯುತ್ವೆ. ಅನ್ನೋಪ್ರಶ್ನೆ ಉದ್ಬವಾಗೋದು ಸರ್ವೆ ಸಾಮಾನ್ಯ.ಆದ್ರೆ,ಈಗ ಎಲ್ಲಾದಕ್ಕೂ ಉತ್ತರ ನೀಡೋದಕ್ಕೆ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಎಸ್ ,ಇಂಥ ಪ್ರಶ್ನೆಗಳಿಗೆ ಬಿಬಿಎಂಪಿ ದೇಶದಲ್ಲೇ ಮೊದಲ ಬಾರಿಗೆ ಉತ್ತರ ಕೊಟ್ಟಿದೆ ಬಿಬಿಎಂಪಿ, ರ್ಯಾಪಿಡ್ ಮಾದರಿಯಲ್ಲಿ ರಸ್ತೆಯನ್ನ ನಿರ್ಮಿಸೋಕೆ ಮುಂದಾಗಿದೆ. ಫ್ರೀ ಕ್ಯಾಸ್ಟ್ ಮಾದರಿಯಲ್ಲಿ ಕಾಂಕ್ರೀಟ್ ರಸ್ತೆಯನ್ನ ಬೆಂಗಳೂರಿಗೆ ಪರಿಚಯಿಸೋಕೆ ಹೊರಟಿದೆ.., ಮನೆಗೆ ಟೈಲ್ಸ್ ಹಾಕೋ ಮಾದರಿಯಲ್ಲೇ‌ ನಗರದ ರಸ್ತೆಗಳ ನಿರ್ಮಿಸೋಕೆ ಬಿಬಿಎಂಪಿ ಹೊರಟಿದೆ. L & T ಕಂಪನಿ ಸಹಯೋಗದೊಂದಿಗೆ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ಹೊಸ ಬಗೆಯ ರಸ್ತೆಯನ್ನು ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ಓಲ್ಡ್ ಮಾದ್ರಾಸ್ ರಸ್ತೆಗೆ ಈ ಯೋಜನೆಯನ್ನೂ ವಿಸ್ತರಿಸಲು ಮುಂದಾಗ್ತಿದೆ.

ಇನ್ನೂ ,, ದೇಶದಲ್ಲೇ ಮೊದಲ ಬಾರಿಗೆ ಸಿದ್ಧವಾಗ್ತಿರೋ ರ್ಯಾಪಿಡೋ ರಸ್ತೆ ಕಾಂಕ್ರಿಟ್ ನಿಂದ ಕೂಡಿದ್ದು, ಕಂಪನಿಯಲ್ಲಿ ಬೇಕಾದ ಆಕಾರದಲ್ಲಿ ಫ್ರಿ ಕ್ಯಾಸ್ಟ್ ಮಾದರಿಯಲ್ಲಿ ಸಿದ್ದವಾಗುತ್ತೆ.., ಹೀಗೆ ಸಿದ್ದವಾದ ರ್ಯಾಪಿಡೋ ರಸ್ತೆಯನ್ನ ಕಾಮಗಾರಿ ನಡಿತಿರೋ ಜಾಗದಲ್ಲಿ ತಂದು ಇರಿಸಲಾಗುತ್ತೆ. ಸಾಮಾನ್ಯವಾಗಿ ವೈಟ್ ಟಾಫಿಂಗ್ ರಸ್ತೆ ಆದ್ರೆ ಕ್ಯೂರಿಂಗ್ ಆಗೋಕೆ ಕನಿಷ್ಟ 21 ದಿನ ಬೇಕು ಅದಾದ ಬಳಿಕ ವಾಹನ ಓಡಾಡೋಕೆ ಅವಕಾಶ ನೀಡಲಾಗುತ್ತೆ ಆದ್ರೆ ರ್ಯಾಪಿಡೋ ರಸ್ತೆಯಲ್ಲಿ ಹಂಗಲ್ಲ. ಒಂದು ಕಡೆ ರಸ್ತೆ ನಿರ್ಮಾಣವಾಗ್ತಿದ್ರೆ ಮತ್ತೊಂದು ಕಡೆ ವಾಹನ ಓಡಾಡೋಕೆ ಅವಕಾಶ ನೀಡಬಹುದು. ವೈಟ್ ಟಾಫಿಂಗ್ ಗೆ ಆಗುವ ವೆಚ್ಚಕ್ಕೆ ಹೋಲಿಸಿದ್ರೆ ಶೇಕಡಾ 16 ರಷ್ಟು ಹೆಚ್ಚಳವಾಗಲಿದ್ದು, ಇದೇ ಮಾದರಿ ಅನುಸರಿಸಿದ್ರೆ ಟ್ರಾಫಿಕ್ ಕಿರಿ ಕಿರಿ ತಪ್ಪಿಸಬಹುದು ಅನ್ನೋದು ಬಿಬಿಎಂಪಿ ಲೆಕ್ಕಾಚಾರ.

ಒಟ್ನಲ್ಲಿ , ರಸ್ತೆಗಳು ಕೂಡ ಟೈಲ್ಸ್ ಮಾದರಿಯಲ್ಲಿ ಬರ್ತಿರೋದು ಒಂದು ರೀತಿಯಲ್ಲಿ ಒಳ್ಳೆಯದೇ ಅಂತ್ತಿದ್ದಾರೆ ತಜ್ಞರು. ಇತ್ತ ಖರ್ಚೂ ಕೂಡ ವೈಟ್ ಟ್ಯಾಪಿಂಗ್ ಗಿಂತ ಸ್ವಲ್ಪ ದುಬಾರಿಯಾದ್ರೂ, ಸಾರ್ವಜನಿಕರಿಗೆ ಮೂರೇ ದಿನದಲ್ಲಿ ರಸ್ತೆ ರೆಡಿ ಹಾಗುತ್ತೆ ಅನ್ನೋದು ಸಂತೋಷದ ವಿಷಯ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES