Wednesday, January 22, 2025

ಲವ್ + ಎಮೋಷನ್ + ಫನ್ = ಗಣಿ ‘ತ್ರಿಬಲ್ ರೈಡಿಂಗ್’

ಗೋಲ್ಡನ್ ಸ್ಟಾರ್ ಗಣಿ ಎಲ್ಲಿ ಇರ್ತಾರೋ ಅಲ್ಲಿ ಅನ್​ಲಿಮಿಟೆಡ್ ಎಂಟರ್​ಟೈನ್ಮೆಂಟ್​ ಫಿಕ್ಸ್. ಮೂರು ಮಂದಿ ನಟೀಮಣಿಯರ ಜೊತೆ ತ್ರಿಬಲ್ ರೈಡಿಂಗ್ ಮಾಡಿರೋ ಗಣಪ, ಆ ಜರ್ನಿಯ ಮಜಲುಗಳನ್ನ ನೋಡುಗರಿಗೆ ಉಣಬಡಿಸೋಕೆ ಕಾತರರಾಗಿದ್ದಾರೆ. ಸಾಧು ಹಾಗೂ ರಂಗಾಯಣ ರಘು ಕೂಡ ಹಾಸ್ಯದ ಹೊನಲು ಹರಿಸಲಿದ್ದಾರೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಗ್ಲಾಮರ್ ಡಾಲ್ಸ್ ಹೇಳಿದ್ದೇನು ಅನ್ನೋದಕ್ಕೆ ಈ ಸ್ಟೋರಿ ಓದಿ.

  • ನವೆಂಬರ್ 25ಕ್ಕೆ ಅನ್​ಲಿಮಿಟೆಡ್ ಎಂಟರ್​ಟೈನ್ಮೆಂಟ್..!
  • 3 ಮಂದಿ ಚೆಲುವೆಯರು, 3 ಕಮೆಡಿಯನ್ಸ್ ಜೊತೆ​ ಗಣಪ
  • ವಿಶ್ಯುವಲ್ ಟ್ರೀಟ್.. ಜಬರ್ದಸ್ತ್ ಮೇಕಿಂಗ್​ನ ದೃಶ್ಯಕಾವ್ಯ

ನಟೋರಿಯಸ್ ಕ್ರಿಮಿನಲ್ ಗರುಡ ಅನ್ನೋ ಮಾತಿನಿಂದ ಶುರುವಾಗೋ ತ್ರಿಬಲ್ ರೈಡಿಂಗ್ ಚಿತ್ರದ ಟ್ರೈಲರ್ ಝಲಕ್, ಆರ್ಮುಗಂ ರವಿಶಂಕರ್ ಖಾಕಿ ಖದರ್, ಗೋಲ್ಡನ್ ಸ್ಟಾರ್ ಹೀರೋಯಿಸಂ ಪವರ್​ನೊಂದಿಗೆ ತೆರೆದುಕೊಳ್ಳುತ್ತೆ. ಹೈ ವೋಲ್ಟೇಜ್ ಫೈಟ್ಸ್ ಜೊತೆ ಡಾಕ್ಟರ್ ಆದವ್ರು ಲವ್ ಮಾಡ್ಬಾರ್ದಾ ಅನ್ನೋ ಗಣಿಯ ಮಾತು, ಅವ್ರ ವೃತ್ತಿಯನ್ನ ಎತ್ತಿ ತೋರಿಸುತ್ತೆ.

ಲವ್ ಓಕೆ.. ಆದ್ರೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂವರೊಂದಿಗೆ ಅನ್ನೋದೇ ಸ್ವಲ್ಪ ಜಾಸ್ತಿ ಇಂಟರೆಸ್ಟಿಂಗ್. ಮೇಘ ಶೆಟ್ಟಿ ಹಾಗೂ ಅದಿತಿ ಪ್ರಭುದೇವ ಗ್ಲಾಮರ್​ ಜೊತೆ ಗಣಿಯ ತುಂಟತನ, ತರ್ಲೆ ಜೋರಾಗೇ ವರ್ಕೌಟ್ ಆಗಿದೆ. ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಅಂತ ಎಂಟರ್ ಆಗೋ ಹೆಂಗೆ ನಾವು ಖ್ಯಾತಿಯ ರಚನಾ. ರಾಮ್ ಅನ್ನೋ ಹೆಸ್ರಿಟ್ಕೊಂಡು ಕೃಷ್ಣನಂತೆ ಲೀಲೆಗಳನ್ನ ನಡೆಸ್ತಾರೆ ಗಣಿ.

ಹುಡ್ಗೀರು ಇರೋದೇ ಹುಡ್ಗರನ್ನ ಹಾಳು ಮಾಡೋಕೆ ಅಂತ ಆರೋಪ ಮಾಡೋ ಗಣಪ. 80 ಪರ್ಸೆಂಟ್ ಹುಡ್ಗರು ಹಾಳಾಗ್ತಿರೋದೇ ಹುಡ್ಗಿಯರಿಂದ ಅಂತ ಬೆಟ್ಟು ಮಾಡಿ ಹೇಳ್ತಾರೆ. ಚಿತ್ರದಲ್ಲಿ ಡ್ಯಾನ್ಸ್ ಕಿಕ್ ಕೊಟ್ರೆ, ಕಾಮಿಡಿ ಡಬಲ್ ಕಿಕ್ ಕೊಡಲಿದೆ. ಕಾರಣ  ಇಲ್ಲಿ ಸಾಲು ಸಾಲು ಹಾಸ್ಯ ಕಲಾವಿದರ ದಂಡು ಇದೆ.

ಸಾಧು ಕೋಕಿಲಾ, ರಂಗಾಯಣ ರಘು, ಕುರಿ ಪ್ರತಾಪ್ ಹೀಗೆ ಸಾಕಷ್ಟು ಮಂದಿ ಗಣಿಗೆ ಸಾಥ್ ನೀಡಿದ್ದಾರೆ. ಇನ್ನು ರವಿಶಂಕರ್ ಜೊತೆ ಶೋಭರಾಜ್ ಹಾಗೂ ಶರತ್ ಲೋಹಿತಾಶ್ವ ವಿಲನ್ ಖದರ್ ಜೋರಿದೆ. ಒಟ್ಟಾರೆ ಉಪ್ಪು, ಹುಳಿ, ಖಾರ ಇರೋ ಪಕ್ಕಾ ಬಾಡೂಟ ಅನ್ನಬಹುದು ಈ ತ್ರಿಬಲ್ ರೈಡಿಂಗ್. ಮಹೇಶ್ ಗೌಡ ನಿರ್ದೇಶನ ಹಾಗೂ ರಾಮ್ ಗೋಪಾಲ್ ಅವ್ರ ನಿರ್ಮಾಣ ಚಿತ್ರದ ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ.

ಒಟ್ಟಾರೆ ತ್ರಿಬಲ್ ರೈಡಿಂಗ್ ಇದೇ ನವೆಂಬರ್ 25ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಸ್ಯಾಂಪಲ್ಸ್​ನಿಂದ ನೋಡುಗರಿಗೆ ಸಿನಿಮಾ ನೋಡೋ ಕಾತುರತೆ ಹೆಚ್ಚಿಸಿದೆ. ಹಾಡುಗಳು ಕೂಡ ಕಲರ್​ಫುಲ್ ಹಾಗೂ ಮಜಭೂತಾಗಿ ಮೂಡಿಬಂದಿದ್ದು, ವಿಶ್ಯುವಲ್ ಟ್ರೀಟ್ ಕೊಡಲಿದೆ ಸಿನಿಮಾ. ಗಣಿಯ ಗೋಲ್ಡನ್ ಡೇಸ್ ಮರಳಿ ಬಂದಿದ್ದು, ಸಕ್ಸಸ್ ಪರ್ವ ಮುಂದುವರೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES