Tuesday, December 24, 2024

ಐಪಿಎಲ್​​’ಗೆ ಗುಡ್​ ಬೈ ಹೇಳಿದ ಕೀರನ್​ ಪೊಲಾರ್ಡ್

ನವದೆಹಲಿ: ಐಪಿಎಲ್​(ಇಂಡಿಯನ್ ಪ್ರೀಮಿಯರ್ ಲೀಗ್‌) ಸ್ಪೋಟಕ ಆಲ್ರೌಂಡ್​ರ್​, ವೆಸ್ಟ್​ ಇಂಡೀಸ್​ ಆಟಗಾರ ಕೀರನ್​ ಪೊಲಾರ್ಡ್​ ಐಪಿಎಲ್​​ಗೆ ಗುಡ್​ ಬೈ ಹೇಳಿದ್ದಾರೆ.

ಈ ವಿಷಯವನ್ನ ಸ್ವತಃ ಕೀರನ್​ ಪೊಲಾರ್ಡ್ ಟ್ವಿಟರ್​ ಮೂಲಕ ಹಂಚಿಕೊಂಡಿದ್ದು, ಐದು ಬಾರಿ ಚಾಂಪಿಯನ್ ಹೊಂದಿದ ಮುಂಬೈ ಇಂಡಿಯನ್ಸ್‌ನೊಂದಿಗೆ ಹಾಗೂ ಸುದೀರ್ಘ 13 ವರ್ಷಗಳ ನಂತರ ವೆಸ್ಟ್ ಇಂಡೀಸ್ ಶ್ರೇಷ್ಠ  ಆಟಗಾರ, ಐಪಿಎಲ್​​ನ ಸ್ಪೋಟಕ ಆಲ್ರೌಂಡರ್​ ಕೀರನ್ ಪೊಲಾರ್ಡ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಭಾರತದಲ್ಲಿ ನಡೆದ 2009 ರ ಚಾಂಪಿಯನ್ಸ್ ಲೀಗ್ T-20 ಸಮಯದಲ್ಲಿ ಫ್ರಾಂಚೈಸ್ ಈ ಸ್ಫೋಟಕ ಹಿಟ್ಟಿಂಗ್ ಮತ್ತು ಆಲ್-ರೌಂಡ್ ಸಾಮರ್ಥ್ಯದಿಂದ ಪ್ರಭಾವಿತರಾದ ನಂತರ 2010 ರಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಪೊಲಾರ್ಡ್ ಅವರನ್ನು ಆಯ್ಕೆ ಮಾಡಲಾಯಿತು. ನಂತರದ IPL ಹರಾಜಿನಲ್ಲಿ, ಅವರು ಮೊದಲಿನ ದಿನಗಳಲ್ಲಿ 1 ಕೋಟಿ ರೂ ಮೂಲ ಬೆಲೆಯನ್ನು ಹೊಂದಿದ್ದರು.

ಪೊಲಾರ್ಡ್ ಅವರು ಈ ವರೆಗೂ ಐಪಿಎಲ್​ನಲ್ಲಿ ಮೂರು ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ಸ್ ಚಾಲೆಂಜರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಆಡಿದ್ದಾರೆ. ನಂತರ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಸುದೀರ್ಘವಾಗಿ ಆಟ ಆಡಿದ್ದಾರೆ.

ವಿಂಡೀಸ್ ಆಲ್‌ರೌಂಡರ್ ಪೋಲಾರ್ಡ್​ ಮುಂಬೈ ಇಂಡಿಯನ್ಸ್‌ನೊಂದಿಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದರು. 2013, 2015, 2017, 2019 ಮತ್ತು 2020. ಮುಂಬೈ ಇಂಡಿಯನ್ಸ್​ ಪರ ಆರು ಪಂದ್ಯಗಳಲ್ಲಿ ತಂಡದ ನಾಯಕರಾಗಿಯೂ ಕಾಣಿಸಿಕೊಂಡರು.  ಪೊಲಾರ್ಡ್ ಅವರನ್ನು ಮುಂಬೈ ತಂಡ ಕಳೆದ ವರ್ಷ 6 ಕೋಟಿಗೆ ಉಳಿಸಿಕೊಂಡಿತ್ತು.

RELATED ARTICLES

Related Articles

TRENDING ARTICLES