Monday, January 27, 2025

ಮಂಗಳೂರಿನ ಸುರತ್ಕಲ್​ ಟೋಲ್​ ಗೇಟ್ ಸಂಗ್ರಹ​ ರದ್ದು.!

ಮಂಗಳೂರು: ಮಂಗಳೂರು-ಉಡುಪಿಯ ಹೆದ್ದಾರಿ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್‌ನ್ನು ರದ್ದು ಪಡಿಸಲಾಗಿದೆ ಎಂದು ನಳೀನ್​ ಕುಮಾರ್​ ಕಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಈ ಭಾಗದ ಜನರಿಗೆ ಭಾರೀ ವಿವಾದದ ಟೋಲ್​ ಗೇಟ್​ ಎಂದೇ ಖ್ಯಾತಿ ಆಗಿರುವ ಮಂಗಳೂರಿನ ಸುರತ್ಕಲ್​ ಟೋಲ್​ ಗೇಟ್​ ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತೀನ್​ ಗಡ್ಕರಿ ಹಾಗೂ ಪ್ರಧಾನಿ ಅವರು ಟೋಲ್​ ರದ್ದು ಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ನಾಗರಿಕರ ಪರವಾಗಿ ತಮ್ಮ ನಾಯಕರಿಗೆ ಧನ್ಯವಾದ ತಿಳಿಸಿದರು.

ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನಮಗೆ ಭರವಸೆ ನೀಡಿದ್ದರು. ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ. ಟೋಲ್​ ರದ್ದುಗೊಳಿಸುವಂತೆ ಹಲವು ದಿನಗಳಿಂದ ನಾನಾ ಸಂಘಟನೆಗಳು ಪ್ರತಿಭಟನೆ ಮಾಡಿದ್ದರು.

RELATED ARTICLES

Related Articles

TRENDING ARTICLES