Wednesday, January 22, 2025

ಹೊಸನಗರ ಪಟ್ಟಣದ ರಸ್ತೆಗಳ ದುಸ್ಥಿತಿ : ಆಪ್ ವಿನೂತನ ರೀತಿಯಲ್ಲಿ ಪ್ರತಿಭಟನೆ

ಶಿವಮೊಗ್ಗ : ಹೊಸನಗರ ತಾಲೂಕು ಪ. ಪಂ. ವ್ಯಾಪ್ತಿಯ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿರುವುದನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದ ಸದಸ್ಯರು, ಮುಖಂಡರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಗುಂಡಿ ಬಿದ್ದ ರಸ್ತೆಗೆ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿದ್ದಾರೆ. ಗುಂಡಿಗೆ ಹೂವು, ಅರಿಶಿಣ, ಕುಂಕುಮ ಹಾಕಿ ಊದುಬತ್ತಿ ಬೆಳಗಿ, ಸ್ಥಳಿಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹೊಸನಗರದ ಎಲ್ಲಾ ರಸ್ತೆಗಳು ಹೊಂಡ, ಗುಂಡಿಗಳು ಬಿದ್ದಿದ್ದು, ಇಲ್ಲಿನ ಪ.ಪಂ. ಆಡಳಿತ ಮಂಡಳಿಯಾಗಲೀ, ಅಧಿಕಾರಿಗಳಾಗಲೀ ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಇನ್ನು, ಸ್ಥಳಿಯಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಬು ಗರ್ಭಿಣಿಯರನ್ನು ವಾಹನಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಲ್ಲಿ ಆಸ್ಪತ್ರೆ ರಸ್ತೆಯ ಹೊಂಡಗಳು ಆಸ್ಪತ್ರೆ ತಲುಪುವ ಮೊದಲೇ ಹೆರಿಗೆ ಮಾಡಿಸುವಂತಾಗಿದೆ. ಈ ಕೂಡಲೇ, ಈ ಬಗ್ಗೆ ಗಮನಹರಿಸಿ, ರಸ್ತೆಗಳಿಗೆ ಟಾರ್ ಹಾಕಿಸಿ, ದುರಸ್ತಿಪಡಿಸಬೇಕಾಗಿ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES