Monday, May 13, 2024

108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ..!

ಬೆಂಗಳೂರು: ಇಂದು 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣವನ್ನು ಪ್ರಧಾನಿ ಮೋದಿ ರವರು ಅನಾವರಣ ಮಾಡಲಾಗಿದೆ. ಅದ್ದೂರಿಯಾಗಿ ಸಂಭ್ರಮವನ್ನು ಆಚರಣೆ ಮಾಡಲಾಗಿದೆ. ಬರೋಬ್ಬರಿ 84 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರತಿಮೆ. ಇನ್ನು ಕೆಂಪೇಗೌಡ ರವರ ಚರಿತ್ರೆಯನ್ನು ಸಾರುವ 21 ಎಕರೇಯಲ್ಲಿ ಥೀಮ್ ಪಾರ್ಕ್​ನ್ನು ಲೋಕಾರ್ಪಣೆ ಮಾಡಿದರು.​

ಇನ್ನು ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಮೂರು ಲಕ್ಷ ಮಂದಿಗೆ ಊಟ, ತಿಂಡಿ ವ್ಯವಸ್ಥೆ
ಸಮಾವೇಶದ ಬಲ ಭಾಗದಲ್ಲಿ ಬೃಹತ್ ಅಡುಗೆ ಮನೆ ನಿರ್ಮಾಣವಾಗಿದೆ. 200 ಅಡಿ ಅಗಲ, 1000 ಅಡಿ ಉದ್ದದ ಅಡುಗೆ ಮನೆ
250 ಬಾಣಸಿಗರು, 5000 ಅಡುಗೆ ಸಿಬ್ಬಂದಿ ನಿಯೋಜನೆ ಹಾಗೂ ಊಟ ಮಾಡಲು ಮೂರು ಎಕರೆ ಜಾಗದಲ್ಲಿ ಬೃಹತ್ ಶಾಮೀಯಾನ ಹಾಕಲಾಗಿದೆ.

ಸಮಾವೇಶದಲ್ಲಿ ‘ಕೆಂಪೇಗೌಡ ಪೇಟ’ವನ್ನು ಮಾನ್ಯ ಮುಖ್ಯಮಂತ್ರಿಗಳು ಪ್ರಧಾನಿ ರವರಿಗೆ ಪೇಟವನ್ನು ತೊಡಿಸಿದರು. ಇನ್ನು ಪೇಟ ಧರಿಸಿ‌ ಪ್ರಧಾನಿ ಮೋದಿ ಕಂಗೋಳಿಸಿದರು.

ಸಮಾವೇಶದಲ್ಲಿ ವಿಐಪಿ , ವಿವಿಐಪಿ ಮತ್ತು ಸಾರ್ವಜನಿಕರಿಗೆ ಬೇರೆ ಬೇರೆ ಅಸನದ ವ್ಯವಸ್ಥೆನ ಮಾಡಲಾಗಿದೆ.
ಎರಡರಿಂದ ಮೂರು ಲಕ್ಷ ಜನಕ್ಕೆ ವ್ಯವಸ್ಥೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES