Monday, June 24, 2024

ವಿಧಾನಸೌಧ ಸುತ್ತಮುತ್ತ ಖಾಕಿ ಸರ್ಪಗಾವಲು..!

ಬೆಂಗಳೂರು:ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಪ್ರಧಾನಿ ಮಾಲಾರ್ಪಣೆ ಹಿನ್ನೆಲೆ, ವಿಧಾನಸೌಧ ಸುತ್ತಮುತ್ತ ಖಾಕಿ ಸರ್ಪಗಾವಲು.
ಮೋದಿ ತೆರಳುವ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್. ಮಾರ್ಗದುದ್ದಕ್ಕೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಚಾಲುಕ್ಯ ಸರ್ಕಲ್‌ನಿಂದ ವಿಧಾನಸೌಧ, ಎಂಎಸ್‌ ಬಿಲ್ಡಿಂಗ್‌ನಿಂದ ವಿಧಾನಸೌಧ, ಪ್ಯಾಲೆಸ್ ರಸ್ತೆಯಿಂದ ವಿಧಾನಸೌಧದ ರಸ್ತೆಗಳು ಬಂದ್ ಆಗಿದ್ದು, ಶಾಸಕ ಭವನಕ್ಕೆ ಆಹ್ವಾನಿತ ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಶಾಸಕ ಭವನದ ಆವರಣದಲ್ಲಿರುವ ಕನಕದಾಸ, ವಾಲ್ಮೀಕಿ ಪ್ರತಿಮೆಗಳು. ವಿಧಾನಸೌಧದ ಹೊರಗಡೆ ಬಿಜೆಪಿ ಬಾವುಟಗಳು ರಾರಾಜೀಸುತ್ತಿವೆ.

ಕನಕದಾಸರ, ವಾಲ್ಮೀಕಿ ಪ್ರತಿಮೆಗಳಿಗೆ ಪ್ರಧಾನಿ ಮಾಲರ್ಪಣೆ ಹಿನ್ನೆಲೆಯಲ್ಲಿ, ಮೋದಿ ಸ್ವಾಗತಿಸಲು ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಕಲಾತಂಡಗಳು.ಡೊಳ್ಳು ಕುಣಿತ ವೀರಗಾಸೆ ಹಾಗೂ ಪೂಜಾ ಕುಣಿತ ಮಾಡಿ ಪ್ರಧಾನಮಂತ್ರಿಗಳ ಸ್ವಾಗತಿಸಲಿದ್ದಾರೆ. ಕಾಲಭೈರವೇಶ್ವರ ಜಾನಪದ ಕಲಾ ತಂಡದಿಂದ ಪ್ರಧಾನಮಂತ್ರಿಯನ್ನ ಸ್ವಾಗತ.  ಕಲಾತಂಡದ ಸದಸ್ಯರಿಗೆ RTPCR ಟೆಸ್ಟ್ ಪರಿಶೀಲನೆ ನಡೆಸಿ, ಒಳಗೆ ಬಿಡುತ್ತಿರುವ ಪೊಲೀಸರು.

RELATED ARTICLES

Related Articles

TRENDING ARTICLES