Friday, July 12, 2024

ಸಂತ್ರಸ್ತನಿಗೆ ಕಚ್ಚಿದ್ದ ಸೂರಜ್ ರೇವಣ್ಣ: ಎಂಜಲು, ಉಗುರು, ಕೂದಲು ಸೇರಿದಂತೆ ಮೆಡಿಕಲ್ ಟೆಸ್ಟ್ ಇಂದು

ಬೆಂಗಳೂರು: ಜೆಡಿಎಸ್ ಯುವ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ MLC ಡಾ. ಸೂರಜ್‌ ರೇವಣ್ಣರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಭಾನುವಾರ ಬೆಳಗ್ಗೆ ಹಾಸನದ ಸೆನ್​ ಠಾಣೆ ಪೊಲೀಸರು ಸೂರಜ್​ನನ್ನು ಬಂಧಿಸಿದ್ದರು. ಬಳಿಕ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಸೂರಜ್​ನನ್ನು ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‌ನ ಜಡ್ಜ್ ಆದೇಶ ಹೊರಡಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ತಡವಾಗಿ ಆಗಮಿಸಿದ ಹಿನ್ನೆಲೆ ಇಂದು ಜೈಲಾಧಿಕಾರಿಗಳು ಸೂರಜ್​ಗೆ ವಿಚಾರಣಾಧೀನ ಕೈದಿ ನಂಬರ್ 6141 ನೀಡಲಿದ್ದಾರೆ. ಇನ್ನು ಇಂದು ಹೆಚ್ಚಿನ ವಿಚಾರಣೆಗೆ ಸೂರಜ್​ನನ್ನು ಸಿಐಡಿ ಅಧಿಕಾರಿಗಳು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಿದ್ದಾರೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಟ ದರ್ಶನ್ ಗೆ ಹಲವು ರೌಡಿಗಳ ಜೊತೆ ನಂಟು: ತುಮಕೂರು ಜೈಲಿಗೆ ಶಿಫ್ಟ್?

ಸೂರಜ್ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ:

ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ಸೂರಜ್ ರೇವಣ್ಣಗೆ ಬೌರಿಂಗ್ ಆಸ್ಫತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ದತೆ ನಡೆದಿದೆ.

ಭಾನುವಾರ ಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತ ಯುವಕನಿಗೆ ಹದಿನೈದು ಮಾದರಿಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ಅದರಂತೆ ಇಂದು ಸೂರಜ್ ರೇವಣ್ಣಗೂ ಕೂಡ ಎಲ್ಲಾ ಮಾದರಿಯ ಮೆಡಿಕಲ್ ಟೆಸ್ಟ್ ಮಾಡಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

ಸಂತ್ರಸ್ತ ಯುವಕನಿಗೆ ದೇಹದ ಮೇಲೆ ಕಚ್ಚಿರುವ ಗುರುತುಗಳು ಪತ್ತೆಯಾಗಿದ್ದರಿಂದ ಸೂರಜ್ ರೇವಣ್ಣನ ಎಂಜಲು, ಉಗುರು, ಕೂದಲು ಸೇರಿದಂತೆ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. ಇನ್ನೂ ಉಳಿದಂತೆ ಸಂತ್ರಸ್ತನಿಗೆ ಏನೆಲ್ಲಾ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತೋ ಅದೇ ತರಹದ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. ನಂತರ ಸಂಸ್ರಸ್ತನ ರಿಪೋರ್ಟ್​ಗೂ ಸೂರಜ್ ರಿಪೋರ್ಟ್​ಗೂ ತಾಳೆಯಾಗುತ್ತಾ ಎಂದು ತನಿಖೆ ನಡೆಸಲಾಗುತ್ತದೆ.

RELATED ARTICLES

Related Articles

TRENDING ARTICLES