Sunday, May 12, 2024

ಪರಿಸರವನ್ನು ಕಾಪಾಡಿದ ಆಡಳಿತದ ದಿಗ್ಗಜ ಕೆಂಪೇಗೌಡ: ಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ. ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ವಿಚಾರ.
ಕೆಂಪೇಗೌಡ ಅತ್ಯಂತ ಒಳ್ಳೆಯ ಆಡಳಿತಗಾರ.ಕೆಂಪೇಗೌಡರು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ.

ಕೆರೆ ಕಟ್ಟೆ ನಿರ್ಮಾಣ, ಪಾರ್ಕ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರೀಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ರು.
ಪರಿಸರವನ್ನು ಕಾಪಾಡಿದ ಆಡಳಿತದ ದಿಗ್ಗಜ ಕೆಂಪೇಗೌಡ. ಅಂತಹ ಆಡಳಿತಗಾರನ ಪ್ರತಿಮೆಯನ್ನು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡ್ತಿರೋದು ಬಹಳ ಗೌರವ. ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ತನ್ವೀರ್ ಸೇಠ್ ಹೇಳಿಕೆ ವಿಚಾರ.

ದೇಶ ಭಕ್ತರ ವಿಚಾರ ಬಹಳ ಬೇಗ ಜನರಿಗೆ ತಲುಪಬಾರದು ಎಂಬ ಉದ್ದೇಶದಿಂದ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಹೊರಟ್ಟಿದ್ದಾರೆ.
ಕೆಂಪೇಗೌಡರು ಇಡೀ ದೇಶಕ್ಕೆ ಆದರ್ಶ. ಟಿಪ್ಪು ಸುಲ್ತಾನ್ ದೇಶದ್ರೋಹಿ ಅಂತಾ ಹೆಸರು ಪಡೆದಿರೋನು. ಕೆಂಪೇಗೌಡರ ಆದರ್ಶ ಜನ ಪರಿಪಾಲನೆ ಮಾಡಬಾರದು ಎಂಬ ಉದ್ದೇಶದಿಂದ ಕೆಲವು ದೇಶದ್ರೋಹಿಗಳು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡ್ತಾರೆ.

ಇನ್ನು ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ, ಕೆಲವರು ಧರ್ಮವನ್ನು ಉಳಿಸುತ್ತಾರೆ.ಧರ್ಮದ ಸಿದ್ದಾಂತ ಸಾಮಾನ್ಯ ಜನರಿಗೆ ತಿಳಿಸುವ ಮೂಲಕ ಪ್ರಖ್ಯಾತಿ ಆಗಿದ್ದಾರೆ.ಇಂದು ಕನಕದಾಸ ಜಯಂತಿ. ಮೊದಲ ಹಿಂದುತ್ವದ ಪ್ರತಿಪಾದಕ ಕನಕದಾಸರು.ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಇಡೀ ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ.ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿರುವ ಜಾರಕಿಹೊಳಿ ರಾಮಾಯಣಕ್ಕೆ, ಮಹಾಭಾರತಕ್ಕೆ, ಈ ದೇಶದ ಸಿದ್ದಾಂತಕ್ಕೆ ಅಪಮಾನ ಮಾಡಿದ್ದಾರೆ. ಅವರ ಪಕ್ಷದ ನಾಯಕರೇ ಖಂಡನೆ ಮಾಡಿದ್ದಾರೆ.ಅಪಮಾನ ಮಾಡಿದಲ್ಲದೇ ಹಿಂದು ಸಮಾಜ‌ ಜಾಗೃತಿಗೊಂಡ ನಂತರ ಮರ್ಯಾದೆ ಇಲ್ಲದ ಜಾರಕಿಹೊಳಿ ಎಲ್ಲರ ಒತ್ತಾಯ ಮಾಡಿದ್ರು. ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತಾ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES