Friday, May 17, 2024

ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ : ಜೆಡಿಎಸ್ ಆಕ್ರೋಶ

ಶಿವಮೊಗ್ಗ :  ನಗರದಲ್ಲಿ ನಡೆಯುತ್ತಿರುವ ರೈಲ್ವೆ ಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, ನಗರದ ಸವಳಂಗ ರಸ್ತೆ, ಸೋಮಿನಕೊಪ್ಪರಸ್ತೆ, ಹೊಳೆಹೊನ್ನೂರು ರಸ್ತೆಗಳಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿವೆ. ಹೀಗಾಗಿ, ಸಂಚಾರಕ್ಕೆ ಕಷ್ಟವಾಗಿದೆ. ಕಿರಿಕಿರಿಯೂ ಆಗಿದೆ. ಆಯಾ ಮೇಲ್ಸೇತುವೆ ಅಥವಾ ಕೆಳಸೇತುವೆ ಭಾಗಗಳ ಮೂಲಕ ಪರ ಊರಿನ ಬಸ್ಸುಗಳು ಸಾಗಬೇಕಾಗಿದೆ. ಆದರೆ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊರಜಿಲ್ಲೆಗಳಿಂದ ಬರುವ ಬಸ್ಸುಗಳು ಮತ್ತು ವಾಹನಗಳು ಸುತ್ತುವರಿದು ಬರಬೇಕಾಗಿದೆ. ಪರ್ಯಾಯ ರಸ್ತೆಗಳು ಕೂಡ ಅವೈಜ್ಞಾನಿಕವಾಗಿವೆ ಎಂದು ದೂರಿದ್ದಾರೆ.

ಶಿಕಾರಿಪುರದಿಂದ ಬರುವ ಸಾರ್ವಜನಿಕರಿಗೆ ಸೋಮಿನಕೊಪ್ಪ ರಸ್ತೆಯ ಕಾಶೀಪುರ, ಜೆಹೆಚ್. ಪಟೇಲ್ ಬಡಾವಣೆ, ಆದರ್ಶ ಬಡಾವಣೆ ಮತ್ತು ಆ ಭಾಗದ ಹಳ್ಳಿಗಳ ಸಾರ್ವಜನಿಕರಿಗೆ ಹಾಗೂ ಹೊಳೆಹೊನ್ನೂರು ರಸ್ತೆಯ ಭಾಗದ ಜನರಿಗೆ ಓಡಾಡಲು ಕಷ್ಟವಾಗಿದೆ. ಇದು ಅಪಘಾತಕ್ಕೂ ಕಾರಣವಾಗಿದೆ. ವಾಹನಗಳ ದಟ್ಟಣೆಯಿಂದ ದೂಳು ತುಂಬಿದ್ದು, ಅನಾರೋಗ್ಯಕ್ಕೂ ಕಾಣವಾಗಿದೆ. ಆದ್ದರಿಂದ ವಿಳಂಬವಾಗುತ್ತಿರುವ ಕಾಮಗಾರಿಗಳನ್ನು ತಕ್ಷಣವೇ ಮುಗಿಸಬೇಕು ಅಲ್ಲಿಯವರೆಗೆ ಗುತ್ತಿಗೆದಾರರೇ ಪರ್ಯಾಯ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES