Thursday, January 23, 2025

ಹಾಲ್​ ಟಿಕೆಟ್​​ನಲ್ಲಿ ಸಲ್ಲಿ ಲಿಯೋನ್​ ಹಾಟ್​​ ಫೋಟೋ: ದೂರು ದಾಖಲು

ಶಿವಮೊಗ್ಗ: ಜಿಲ್ಲೆಯ ಟಿಇಟಿ ಮಹಿಳಾ ಅಭ್ಯರ್ಥಿ ಹಾಲ್ ಟಿಕೆಟ್ ನಲ್ಲಿ ಬಾಲಿವುಡ್​ ನಟಿ, ಹಾಟ್ ತಾರೆ ಸನ್ನಿ ಲಿಯೋನ್ ಫೋಟೊ ಕೇಸ್​ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗ ಎಸ್.ಪಿ ಕಚೇರಿಯಲ್ಲಿ ದೂರು ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು ಮೂಲದ ಮಹಿಳಾ ಅಭ್ಯರ್ಥಿ ಇತ್ತೀಚಿಗೆ ತನ್ನ ಪರೀಕ್ಷೆಯ ಹಾಲ್​ ಟಿಕೆಟ್​ ನೀಡಿದ ಅಭ್ಯರ್ಥಿ ಬದಲಿಗೆ ಸನ್ನಿ ಲಿಯೋನ್​ ಫೋಟೋ ಪ್ರಕಟಿಸಿರೋದು ಬೆಳಕಿಗೆ ಬಂದಿತ್ತು.

ಫೋಟೋಗೆ ಸಂಬಂಧಿಸಿದಂತೆ ಶಿವಮೊಗ್ಗದ ಡಿಡಿಪಿಐ ಪರಮೇಶ್ವರಪ್ಪ, ಬಿಇಓ ಲೋಕೇಶ್, ಎನ್​ಇಎಸ್​ನ ಹೆಚ್.ಎಸ್. ರುದ್ರಪ್ಪ, ಕಾಲೇಜು ಪ್ರಾಂಶುಪಾಲ ಚನ್ನಪ್ಪ ಮತ್ತೀತರರು ಅಧಿಕಾರಿಗಳು ಸೇರಿ ಪರೀಕ್ಷಾ ಕೇಂದ್ರದ ಕಾಲೇಜು ಪ್ರಾಂಶುಪಾಲರಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಇನ್ನು ಈ ಕೇಸ್​ನ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಅಭ್ಯರ್ಥಿ ಬದಲಿಗೆ ಸನ್ನಿ ಲಿಯೊನ್ ಫೋಟೊ ಬಂದಿದ್ದಾದರೂ ಹೇಗೆ? ಫೋಟೊ ಎಲ್ಲಿಂದ ಅಪ್‌ಲೋಡ್ ಎಂಬ ಕುರಿತು ಹಾಗೂ ಪರೀಕ್ಷಾ ಕೇಂದ್ರ ಶಿವಮೊಗ್ಗದಲ್ಲಿ ಇರುವುದರಿಂದ ಇಲ್ಲಿಯೇ ದೂರು ದಾಖಲು ಮಾಡಲಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್​ಪಿ ಟಿಇಟಿ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಅಶ್ಲೀಲ ಫೋಟೊ ಅಪ್ಲೋಡ್ ಆಗಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ದೂರು ಆಧರಿಸಿ ಈಗಾಗಲೇ ತನಿಖೆ ಆರಂಭಿಸಿದ್ದೇವೆ. ಅಭ್ಯರ್ಥಿ ಬಳಿ ಮಾಹಿತಿ ಪಡೆಯಲಾಗಿದೆ. ಅರ್ಜಿ ಸಲ್ಲಿಕೆಗಾಗಿ ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ತಿಳಿಸಿದ್ದಾರೆ. ಸಂಬಂಧಪಟ್ಟ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದರು.

RELATED ARTICLES

Related Articles

TRENDING ARTICLES