Monday, May 13, 2024

ಕ್ರಿಕೆಟ್​​ನಿಂದ ಧನುಷ್ಕ ಗುಣತಿಲಕ ಅಮಾನತು

ಅತ್ಯಾಚಾರ ಕೇಸ್​​ನಲ್ಲಿ ಬಂಧನಕ್ಕೆ ಒಳಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ಧನುಷ್ಕ ಗುಣತಿಲಕ ಅವರನ್ನು ಎಲ್ಲಾ ಪ್ರಕಾರದ ಕ್ರಿಕೆಟ್​​​ನಿಂದ ಅಮಾನತು ಮಾಡಿ ಶ್ರೀಲಂಕಾ ಕ್ರಿಕೆಟ್​​ ಮಂಡಳಿ ಆದೇಶಿಸಿದೆ.

ಅತ್ಯಾಚಾರದ ಆರೋಪದ ಮೇಲೆ ಶ್ರೀಲಂಕಾ ಬ್ಯಾಟರ್ ಧನುಷ್ಕ ಗುಣತಿಲಕರನ್ನು ಸಿಡ್ನಿ ಪೊಲೀಸರು ನಿನ್ನೆ ಬಂಧಿಸಿದ್ರು. ಸಿಡ್ನಿಯ 29 ವರ್ಷದ ಮಹಿಳೆ ಗುಣತಿಲಕ ಅವರ ಮೇಲೆ ಅತ್ಯಾಚಾರದ ದೂರು ನೀಡಿದ್ರು. ರೋಸ್‌ಬೇಯಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಗುಣತಿಲಕ ಆನ್‌ಲೈನ್ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೊಬ್ಬರ ಸಂಪರ್ಕ ಮಾಡಿದ್ದರು. ಬಳಿಕ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES