Monday, December 23, 2024

ಹುಬ್ಬಳ್ಳಿ ನಾಯಕರ ಮೇಲೆ ಡಿಕೆಶಿ ಫುಲ್ ಗರಂ

ಬೆಂಗಳೂರು: ಬೆಂಗಳೂರಿನ ಕಾಂಗ್ರೆಸ್ ಸಭೆಯಲ್ಲಿ, ಹುಬ್ಬಳ್ಳಿ ನಾಯಕರ ಮೇಲೆ ಡಿಕೆಶಿ ಫುಲ್ ಗರಂ ಆಗಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಆಕಾಂಕ್ಷಿಗಳ ಆಸೆಗೆ ತಣ್ಣೀರು ಹಾಕಿದ ಕೆಪಿಸಿಸಿ ಅಧ್ಯಕ್ಷ. ಜಿಲ್ಲೆಯ ದೂರು ದುಮ್ಮಾನ ಸ್ವೀಕರಿಸುವ ವೇಳೆ ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧೆ ಬಗ್ಗೆ ಮಾತುಕತೆ.

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ದಿಸಿದ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಸೇರಿದ್ದಾರೆ. ಶೆಟ್ಟರ್ ವಿರುದ್ಧ ಸ್ಪರ್ದಿಸಲು ಸೂಕ್ತ ಅಭ್ಯರ್ಥಿ ಹಾಕುವಂತೆ ಅಲ್ತಾಫ್ ಹಳ್ಳೂರು ಡಿಕೇಶಿಗೆ ಮನವಿ. ಈ ವೇಳೆ ತಾನು ಸ್ಪರ್ದಿಸುವುದಾಗಿ ಆಸೆ ತೋರಿದ ಡಿಸಿಸಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್. ಅನಿಲ್ ಕುಮಾರ್ ವಿರುದ್ಧ ಹರಿಹಾಯ್ದು ಫುಲ್ ಗರಂ ಆಗಿದ್ದಾರೆ ಡಿಕೆ ಶಿವಕುಮಾರ್.

ಈ ಹಿಂದೆ ಶ್ರೀರಾಮಲು ಭೇಟಿ ಯಾಕೆ ಮಾಡಿದಿರಿ ಎಂದು ಪಾಟೀಲ್ ಗೆ ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಬೆನ್ನುಬಿದ್ದಿರುವರಿಗೆ ಡಿಕೆ ಟಾರ್ಗೆಟ್. ಇಂದಿನಿಂದ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ನಾಯಕರು
ಪಿಕೆ ರಾಯನಗೌಡ್ರ, ರಜತ್ ಉಳ್ಳಾಗಡ್ಡಿಮಠ, ಅನಿಲ್ ಕುಮಾರ್ ಪಾಟೀಲ್ ಮದ್ಯೆ ಇರುವ ಪೈಪೋಟಿ. ಸಂಘಟನೆಯಲ್ಲಿ ತೊಡಗಿರುವ ಅಭ್ಯರ್ಥಿಗೆ ಮಣೆ ಹಾಕುವುದಾಗಿ ಡಿಕೆಶಿ ಸೂಚನೆ ನಿಡಿದ್ದಾರೆ.

RELATED ARTICLES

Related Articles

TRENDING ARTICLES