Sunday, December 22, 2024

KGF ಹಿಂದಿ ಹಾಡು ಬಳಕೆ; ರಾಹುಲ್ ಗಾಂಧಿ ಸೇರಿದಂತೆ ಇನ್ನೀತರರ ವಿರುದ್ಧ ಕೇಸ್​ ದಾಖಲು.!

ಬೆಂಗಳೂರು: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಅನುಮತಿ ಇಲ್ಲದೆ ಕೆಜಿಎಫ್ ಚಿತ್ರದ ಹಿಂದಿ ಹಾಡು ಬಳಕೆ ಹಿನ್ನಲೆಯಲ್ಲಿ ಕಾಂಗ್ರೆಸ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಯಾರಿಗೂ ಹೇಳದೆ ಕೆಜಿಎಫ್ ಚಿತ್ರದ ಹಿಂದಿ ಹಾಡು ಬಳಕೆ ಮಾಡಿದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ‌ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಎಂಆರ್ಟಿ ಮ್ಯೂಸಿಕ್ ಮಾಲೀಕ ನವೀನ್ ಕುಮಾರ್ ರಿಂದ ದೂರು ದಾಖಲಾಗಿದೆ.

ಕೆ.ಜಿ.ಎಫ್ ಹಿಂದಿ ವರ್ಷನ್ ಹಾಡುಗಳನ್ನ ಖರೀದಿ ಮಾಡಿದ ಮಾಲೀಕರಾದ ನವೀನ್, ಅನುಮತಿ ಇಲ್ಲದೆ ಹಾಡನ್ನ ಎಡಿಟ್ ಮಾಡಿ ಕಾಂಗ್ರೆಸ್​ ರಾಹುಲ್ ಗಾಂಧಿ ಭಾರತ್ ಜೋಡೋಗೆ ಬಳಕೆ ಮಾಡಲಾಗಿದೆ ಎನ್ನಲಾಗಿದೆ.

ಐಪಿಸಿ, ಕಾಪಿರೈಪ್ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕಾಂಗ್ರೆಸ್​ನ ಜೈರಾಮ್ ರಮೇಶ್, ಸುಪ್ರಿತಾ ಶ್ರಿ‌ನಾಥ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

RELATED ARTICLES

Related Articles

TRENDING ARTICLES