Thursday, January 23, 2025

ಗಾಂಜಾ ವ್ಯಸನಿಯಿಂದ ಹಣ ದೋಚಿದ್ರಾ ಪೊಲೀಸರು..?

ಕೊಡಗು: ಕುಶಾಲನಗರದ ಗುಡ್ಡೆಹೊಸೂರಿನಲ್ಲಿ ಗಾಂಜಾ ವ್ಯಸನಿಯಿಂದ ಪೊಲೀಸರು ಹಣ ದೋಚಿದ್ರಾ ಎಂದು ಹೇಳಲಾಗುತ್ತಿದ್ದು, ಇನ್ನು ಈ ಘಟನೆ ಕುಶಾಲನಗರ ಟೌನ್ ಪೊಲೀಸ್ ಠಾಣೆ ಪೇದೆಗಳ ವಿರುದ್ಧ ಆರೋಪ ಕೇಳಿಬಂದಿದೆ.

ಗಾಂಜಾ ವ್ಯಸನಿ ಯಿಂದ 30 ಸಾವಿರ ಹಣ ಪಡೆದ ಆರೋಪ ಕೇಳಿಬಂದಿದ್ದು, ಮೊದಲಿಗೆ ಪೇದೆಗಳಿಂದ 1 ಲಕ್ಷಕ್ಕೆ ಬೇಡಿಕೆ. ಹಣ ಇಲ್ಲ ಎಂದಿದ್ದಕ್ಕೆ 80 ಸಾವಿರಕ್ಕೆ ಕೊನೆಗೆ 30 ಸಾವಿರ ಹಣ ಪಡೆದ ಆರೋಪ.

ಗಾಂಜಾ ವ್ಯಸನಿ ಬಳಿ ಇದ್ದ ಒಂದು ಪ್ಯಾಕೇಟ್ ಗಾಂಜಾ ಪಡೆದ ಪೇದೆಗಳು. ತಮ್ಮಲ್ಲಿದ್ದ ಒಂದು ಪ್ಯಾಕೇಟ್ ಕೊಟ್ಟು ಪೋಟೋ ತಗೆದ ಪೇದೆಗಳು. ತಮ್ಮ ಕಾರಿನಲ್ಲೇ ಮನೆಗೆ ಕರೆತಂದು ಮನೆಯಲ್ಲಿದ್ದ ಹಣ 30 ಸಾವಿರ ಹಣ ಪಡೆದ ಪೇದೆಗಳು, ಪ್ರಕರಣ ಸಂಬಂಧ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ.

RELATED ARTICLES

Related Articles

TRENDING ARTICLES