Thursday, October 31, 2024

ಮುಸಲ್ಮಾನ್ ಗೂಂಡಾಗಳಿಗೆ ಪೊಲೀಸ್ ಇಲಾಖೆ ಸರಕಾರದ ಭಯ ಇಲ್ಲ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಮುಸಲ್ಮಾನ್ ಗೂಂಡಾಗಳಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಸರಕಾರದ ಭಯ ಇಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸಲ್ಮಾನ್ ಗೂಂಡಾಗಳಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಸರಕಾರದ ಭಯ ಇಲ್ಲ, ಹರ್ಷನ ಕೊಲೆ ನಂತರ ಎನ್ ಐಎಗೆ ವಹಿಸಿದ ನಂತರ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಲಾಂಗ್ ಮಚ್ವು ಬಳಸಿಲ್ಲ, ಕಲ್ಲಿನಿಂದ ಹೊಡೆದಿದ್ದಾರೆ. ಪಿಎಫ್ ಐ ಸಂಘಟನೆ ಕೈವಾಡ ಇದೆಯೋ, ಅಥವಾ ಬೇರೆ ಗೂಂಡಾಗಳ ಕೈವಾಡ ಇದೆಯೋ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು, ಸರಕಾರ ಹೆಚ್ಚಿನ ಕ್ರಮ ವಹಿಸಬೇಕು ಎಂದರು.

ಇನ್ನು, ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಯಾರೂ ಕೂಡಾ ಉತ್ತೇಜನ ಕೊಡುವಂತಹ ಮಾತು ಆಡಿಲ್ಲ. ಮುಸಲ್ಮಾನ ಹಿರಿಯರು ಅವರ ಮಕ್ಕಳಿಗೆ ಬುದ್ದಿ ಹೇಳಬೇಕು. ರಾಷ್ಟ್ರ ದ್ರೋಹಿ ಚಟುವಟಿಕೆಯಲ್ಲಿ‌ ಭಾಗವಹಿಸದಂತೆ ತಿಳಿ ಹೇಳಬೇಕು. ನೀವು ಬುದ್ದಿ ಹೇಳದಿದ್ದರೆ ಅರೆಸ್ಟ್ ಆಗ್ತಾರೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಅದಲ್ಲದೇ, ಹರ್ಷನ ಮನೆ ಬಳಿ ಹೋಗಿ ಬೆದರಿಕೆ ಹಾಕಿದವರ ಬಂಧಿಸಬೇಕು, ಬೆದರಿಕೆ ಹಾಕಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಹರ್ಷನ ಕೊಲೆ ನಂತರ ಇಂತಹ ಘಟನೆ ಕಡಿಮೆಯಾಗಿತ್ತು. ಆದರೆ ನಿನ್ನೆ ಮತ್ತೆ ಘಟನೆ ನಡೆದಿದೆ. ಕೇಂದ್ರ ಹಾಗು ರಾಜ್ಯ ಸರಕಾರ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಹಾಳು ಮಾಡಬೇಕು ಎಂಬುದನ್ನು ಕೆಲವೇ ಮುಸಲ್ಮಾನರು ಮಾಡ್ತಿದ್ದಾರೆ. ಇಂತಹ ಘಟನೆ ನಡೆದಾಗ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರು ಬಾಯಿ ಬಿಡೋದೆ ಇಲ್ಲ. ನಮ್ಮ ಜೊತೆ ಕಾಂಗ್ರೆಸ್ ಇದೆ ಎಂಬ ಮನೋಭಾವನೆ ಮುಸಲ್ಮಾನ ಗೂಂಡಾಗಳಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES