Friday, May 17, 2024

AICC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಗಿದ್ದು ಪಕ್ಷಕ್ಕೆ ಆನೆ ಬಲ; ಜಮೀರ್ ಅಹ್ಮದ್ ಖಾನ್

ಹುಬ್ಬಳ್ಳಿ: ಬಿಜೆಪಿಯವರು ತಮ್ಮ ಬೆಳೆ ಬೇಯಿಸಿಕೊಳ್ಳಲು ಹಿಂದೂ-ಮುಸ್ಲಿಂರಲ್ಲಿ ಒಡಕುಂಟು ಮಾಡುವ ಕೆಲಸ ಮಾಡುತ್ತಿದೆ. ಅವರು ಹಿಂದೂಗಳ ಪರವು ಅಲ್ಲ. ಮುಸ್ಲಿಂರ ಪರವು ಅಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಕಟ್ ವಿಚಾರ ಹಳೆಯ ವಿಚಾರ. ಈಗಾಗಲೇ ಹಲಾಲ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಮುಸ್ಲಿಂರಕ್ಕಿಂತ ಹಿಂದೂಗಳೇ ಹೆಚ್ಚಾಗಿ ವಿರೋಧ ಮಾಡಿದ್ದಾರೆ. ನಾವು ಬಹಳ ದಿನಗಳಿಂದಲೂ ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡತ್ತೇವೆ. ಹಾಗಾಗಿ ಅದನ್ನು ನಿಲ್ಲಿಸೋಕ್ಕೆ ಯಾರಿಂದಲೂ ಸಾಧ್ಯವಿಲ್ಲ. ನಾವು ತಿಂದೇ ತಿನ್ನುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಅಣ್ಣ ತಮ್ಮಂದಿರ ಹಾಗೇ ಇರುವ ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ರ ನಡುವೆ ವ್ಯತ್ಯಾಸ ತರೋದಕ್ಕೆ ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಇದೀಗ ದೀಪಾವಳಿ ಹಬ್ಬವಿದೆ. ಈ ವೇಳೆ ಬಹಳಷ್ಟು ಜನರು ಮುಸ್ಲಿಂ ಜನರೇ ದೀಪಗಳನ್ನು ಮಾರಾಟ ಮಾಡುತ್ತಾರೆ. ಹಾಗಾದರೇ ಯಾರಾದರೂ ಮುಸ್ಲಿಂ ವ್ಯಾಪಾರಸ್ಥರ ವಸ್ತುಗಳನ್ನು ಖರೀದಿ ಮಾಡುವುದಿಲ್ಲ ಎಂದು ಹೇಳಲಿ ನೋಡೋಣ. ಬಿಜೆಪಿಯವರು ಒಳ್ಳೆಯ ಕೆಲಸ ಮಾಡಲಿ. ಜೋಡಿಸುವ ಕೆಲಸ ಮಾಡಬೇಕು ಒಡೆಯುವ ಕೆಲಸ ಅಲ್ಲ ಎಂದು ಹೇಳಿದರು.

ಭಾರತ ಜೋಡೋ ಬಗ್ಗೆ ಬಿಜೆಪಿಯವರು ನಿರೀಕ್ಷೆ ಇಟ್ಟಿದ್ದಿಲ್ಲ. ಆದರೆ ಇದೀಗ ಜನರು ಸ್ವತಃ ತಾವಾಗಿಯೇ ಆಗಮಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಇದನ್ನು ಸಹಿಸಲು ಆಗದ ಬಿಜೆಪಿಗರು ಭಯದಲ್ಲಿ ಭಾರತ ಜೋಡೊವನ್ನು ವಿರೋಧ ಮಾಡುತ್ತಿದ್ದಾರೆ ಎಂದರು‌.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಆಗಿದ್ದು ಪಕ್ಷಕ್ಕೆ ಆನೆ ಬಲ ಬಂದಂತೆ ಆಗಿದೆ. ಅವರೊಬ್ಬ ಹಿರಿಯ ರಾಜಕಾರಣಿ. ಅವರಿಂದ ನಮ್ಮ ಪಕ್ಷಕ್ಕೆ ಲಾಭ ಆಗುತ್ತದೆ ಎಂದು ಜಮೀರ್ ಅಹಮ್ಮದ್ ಹೇಳಿದರು.

RELATED ARTICLES

Related Articles

TRENDING ARTICLES