Wednesday, January 22, 2025

ಬೆಂಗಳೂರಿನಲ್ಲಿ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಹಿನ್ನಲೆಯಲ್ಲಿ ಬೆಂಗಳೂರಿನ ಯಶವಂತಪುರ, ಯಲಹಂಕ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ, ಶಾಂತಿನಗರ, ಮೆಜೆಸ್ಟಿಕ್, ಜಯನಗರ, ಕಾಮಾಕ್ಯ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಆಗಿದೆ.

ಬೆಂಗಳೂರಿನ ಕೆಲವು ಕಡೆ ಬಿರುಗಾಳಿ ಸಮೇತವಾಗಿ ಕಳೆದು 3 ಗಂಟೆಯಿಂದ ಬಿಟ್ಟು ಬಿಡದೇ ಮಳೆ ಮುಂದುವರಿದಿದೆ. ಇನ್ನು ನಿರಂತರ ಮಳೆಯಿಂದ ರಸ್ತೆಗಳು ಕೆರೆಯಂಗಳದಂತಾಗಿದ್ದು, ವಾಹನ ಸವಾರರು ಸೇರಿದಂತೆ ಜನಜೀವನ ಅಸ್ತವ್ಯಸ್ತಗೊಂಡಿತು.

ಭಾರಿ ಮಳೆಗೆ ಬೆಂಗಳೂರಿನ ಹೆಬ್ಬಾಳದ ಗಂಗಮ್ಮ ಲೇಔಟ್ ಸಂಪೂರ್ಣ ಮುಳುಗಡೆ ಆಯಿತು. ಈ ಬಗ್ಗೆ ಶಾಸಕ ಬೈರತಿ ಸುರೇಶ್ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ.

RELATED ARTICLES

Related Articles

TRENDING ARTICLES