ಮಧ್ಯಪ್ರದೇಶ : ಕೆಲ ತಿಂಗಳ ಹಿಂದೆ ವಾರಾಣಸಿಯ ಕಾಶಿಯಲ್ಲಿ ಕಾರಿಡಾರ್ ಉದ್ಘಾಟನೆ ಬಳಿಕ ಇದೀಗ ಮಂದಿರ ಪರಿಸರ ವಿಸ್ತಾರ್ ಯೋಜನೆಯಡಿ ಮರು ಅಭಿವೃದ್ಧಿಗೊಳಿಸಲಾದ ಮಧ್ಯಪ್ರದೇಶ ಉಜ್ಜೈನಿಯಲ್ಲಿ ಮಹಾಕಾಲೇಶ್ವರ ದೇವಾಲಯ ಕಾರಿಡಾರ್ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ರು. ಇದೇ ವೇಳೆ ಪಿಎಂ ಮೋದಿಗೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಾಥ್ ಕೊಟ್ರು.
ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಮೊದಲ ಹಂತದ ವಿಸ್ತರಣೆಯಾದ ಮಹಾಕಾಲ್ ಲೋಕ ಕಾರಿಡಾರ್‌ಅನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ರು..ಇನ್ನು ಲೋಕಾರ್ಪಣೆ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ದೊಡ್ಡ ಟಿವಿ ಪರದೆಗಳಿಂದ ಹಿಡಿದು ಮಹಾಕಾಳೇಶ್ವರ ದೇವಸ್ಥಾನಕ್ಕೆ ದಾರಿ ಮಾಡುವ 600 ಮೀಟರ್ ಉದ್ದದ ಹರಿ ಫಾಟಕ್ ಸೇತುವೆಯ ರೇಲಿಂಗ್‌ಗಳ ಉದ್ದಕ್ಕೂ ಎಣ್ಣೆ ದೀಪಗಳನ್ನು ಇರಿಸಲಾಗಿತ್ತು.
ಇನ್ನು ಯೋಜನೆಯ ಮೊದಲ ಹಂತದ ಕಾಮಗಾರಿಯು 900 ಮೀಟರ್ ಉದ್ದದ ಕಾರಿಡಾರ್ ಅನ್ನು ಸ್ಕೋರ್ ಇನ್ಸ್ಟಾಲೇಷನ್, ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಸಾರಿಗೆ ಸೌಲಭ್ಯಗಳು ಮುಂತಾದವುಗಳನ್ನು ಒಳಗೊಂಡಿದೆ. 856 ಕೋಟಿ ರೂ.ಗಳ ಈ ಯೋಜನೆ ಮಿಡ್ ವೇ ಝೋನ್, ಪಾರ್ಕ್, ಕಾರುಗಳು ಮತ್ತು ಬಸ್‌ಗಳಿಗೆ ಬಹು ಅಂತಸ್ತಿನ ಪಾರ್ಕಿಂಗ್, ಸೋಲಾರ್ ಲೈಟಿಂಗ್, ಯಾತ್ರಾರ್ಥಿಗಳಿಗೆ ಸೌಲಭ್ಯ ಕೇಂದ್ರ, ಮೆಗಾ ಎಂಟ್ರಿ, ಗೇಟ್, ನರಸಿಂಗ್ ಘಾಟ್ ರಸ್ತೆ, ನೀರಿನ ಪೈಪ್‌ಲೈನ್ ಮತ್ತು ಒಳಚರಂಡಿ ಮಾರ್ಗವನ್ನು ಒಳಗೊಂಡಿದೆ.
ಈ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ನಲ್ಲಿ ಶಿವ ತಾಂಡವ ಶ್ಲೋಕಗಳನ್ನು ಪ್ರದರ್ಶಿಸುವ 108 ಸ್ತಂಭಗಳು ಮತ್ತು ವಿವಿಧ ಕಥೆಗಳನ್ನು ಬಿಂಬಿಸುವ 52 ಭಿತ್ತಿಚಿತ್ರಗಳನ್ನು ಅಳವಡಿಸುವುದರೊಂದಿಗೆ ಬೆಳಕಿನ ಮತ್ತು ಧ್ವನಿ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹಲವಾರು ಪ್ರತಿಮೆಗಳನ್ನು ಸಹ ನಿರ್ಮಿಸಲಾಗಿದೆ.
ಒಟ್ಟಾರೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಿರ್ಮಾಣವಾಗಿರುವ ಕಾರಿಡಾರ್ ಭಕ್ತರನ್ನ ಸೆಳೆಯೋದ್ರ ಜೊತೆಗೆ ಕೇಂದ್ರಕ್ಕೆ ಉತ್ತಮ ಆದಾಯ ತಂದುಕೊಡಲಿದೆ.