Friday, May 17, 2024

2023ರ ಚುನಾವಣೆ ಗೆಲ್ಲಲು ಕೇಸರಿ ಬ್ರಿಗೇಡ್‌ ಪ್ಲ್ಯಾನ್

ರಾಯಚೂರು : ಕಾಂಗ್ರೆಸ್‌ನ ಭಾರತ್ ಜೋಡೊ ಪಾದಯಾತ್ರೆ ಆಡಳಿತಾರೂಢ ಬಿಜೆಯಲ್ಲಿ ಭಾರೀ ತಳಮಳ ಉಂಟು ಮಾಡಿದೆ. ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಾರೀ ತಳಮಳ ಶುರುವಾಗಿದೆ. ಶತಾಯ ಗತಾಯ ಕಾಂಗ್ರೆಸ್ ಪಾದಯಾತ್ರೆಗೆ ಕೌಂಟರ್ ಕೊಟ್ಟು ಮುಂದಿನ ಬಾರಿಯೂ ಅಧಿಕಾರ ಉಳಿಸಿಕೊಳ್ಳಲು ಕೇಸರಿ ಬ್ರಿಗೇಡ್ ಪ್ಲ್ಯಾನ್ ಮಾಡಿಕೊಂಡಿದೆ. ಇದರ ಮುದುವರಿದ ಭಾಗವಾಗಿ ರಾಯಚೂರು ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆಗೆ ಅದ್ದೂರಿ ಚಾಲನೆ ನೀಡಲಾಯಿತು.

ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಲ್ಯಾಣ ಕರ್ನಾಟಕದ ಭಾಗದಲ್ಲಿ 3 ಸಾವಿರ ಕೋಟಿ ವೆಚ್ಚದ ಕಾಮಗಾರಿ‌ಗಳು ನಡೆಯುತ್ತಿವೆ. ಮುಂಬರುವ ಬಜೆಟ್ನಲ್ಲಿ 5 ಸಾವಿರ ಕೋಟಿ ರೂಪಾಯಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡುವೆ ಅಂತಾ ಭರವಸೆ ನೀಡಿದರು. ಅಲ್ಲದೆ, ಕಾಂಗ್ರೆಸ್ ಮುಳುಗುತ್ತಿರುವ ಹಡುಗು ಹಲವರು ಜಿಗಿದು ಬಿಜೆಪಿಗೆ ಬರಲು ಸಿದ್ದರಿದ್ದಾರೆ. ರಾಯಚೂರು ಜಿಲ್ಲೆಯಲ್ಲೂ ರಾಜಕೀಯ ಬದಲಾವಣೆಯಾಗಲಿದೆ.ಮುಂದಿನ ವಾರ ದೆಹಲಿಗೆ ತೆರಳಿ ಮೋದಿ ಆಶೀರ್ವಾದದಿಂದ ರಾಯಚೂರಿಗೆ ಏಮ್ಸ್ ಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ150 ಸ್ಥಾನ ಗೆಲ್ಲಲಿದೆ ಎಂದರು. ಯುಪಿಎ ಸರ್ಕಾರದ 12 ಲಕ್ಷ ಕೋಟಿ ಭ್ರಷ್ಟಾಚಾರದಲ್ಲಿ ಗಾಂಧಿ ಕುಟುಂಬದ ಪಾಲೆಷ್ಟು..? ಮೋದಿಯವರ ಬಗ್ಗೆ ಹಗುರವಾಗಿ ಮಾತಾಡಿದರೆ ದೇಶದ ಜನ‌ ನಿಮ್ಮನ್ನ ಕ್ಷಮಿಸೋದಿಲ್ಲ.ನಿಮಗೆ ಆ ಯೋಗ್ಯತೆ ಇಲ್ಲ,ಅವರ ಕಾಲ ಬಳಿ ಕೂತ್ಕೊಳ್ಳುವ ಯೋಗ್ಯತೆಯೂ ಇಲ್ಲ. ಸಿದ್ದರಾಮಯ್ಯ ನಿಮ್ಮ ಸಿಎಂ ಕನಸು ನನಸಾಗಲು ನಾವು ಬಿಡುವುದಿಲ್ಲ.
ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬೆಳಕಿಗೆ ತಂದು ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲೇ ನಿಲ್ಲಿಸ್ತೇವೆ.ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತಾಡ್ತಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜನಸಂಕಲ್ಪ ಯಾತ್ರೆಗಾಗಿ ಸರ್ಕಾರಿ ಪಿಯು ಕಾಲೇಜಿನ ಕಾಂಪೌಂಡ್ ಒಡೆಯುವ ಮೂಲಕ ಬಿಜೆಪಿ ಮುಖಂಡರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಯಾತ್ರೆ ಸಮಾರಂಭದಲ್ಲಿ ಪೈಪೋಟಿಯಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಯವರನ್ನ‌ ಸಚಿವ, ಶಾಸಕರು ಹೊಗಳಿ ಅಟ್ಟಕ್ಕೇರಿಸಿದ್ದು ವಿಶೇಷವಾಗಿತ್ತು.

ಸಿದ್ದು ಬಿರಾದಾರ್ ಪವರ ಟಿವಿ ರಾಯಚೂರು

RELATED ARTICLES

Related Articles

TRENDING ARTICLES