Friday, May 17, 2024

ದಲಿತ ಸಮುದಾಯವನ್ನ ಹಿಡಿದಿಡಲು ನೇರವಾಗಿ ಅಖಾಡಕ್ಕಿಳಿದ ಬಿ.ಎಲ್.ಸಂತೋಷ್

ಬೆಂಗಳೂರು : AICC ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ್‌ ಖರ್ಗೆಗೆ ಒಲಿಯುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಶುರುವಾಗಿದೆ ತಳಮಳ ಉಂಟಾಗಿದೆ.

ದಲಿತ ಸಮುದಾಯ ಎಲ್ಲಿ ಪಕ್ಷಕ್ಕೆ ಕೈಕೊಡುತ್ತೋ ಎಂಬ ಭಯ ಉಂಟಾಗಿದ್ದು, ದಲಿತ ಸಮುದಾಯವನ್ನ ಹಿಡಿದಿಡಲು ವರಿಷ್ಠರು ಶತ ಪ್ರಯತ್ನಿಸಲಾಗಿದ್ದು, ಬಿ.ಎಲ್.ಸಂತೋಷ್ ನೇರವಾಗಿ ಅಖಾಡಕ್ಕಿಳಿದಿದ್ದಾರೆ. B.L.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ. ನಿನ್ನೆ ಹುಬ್ಬಳ್ಳಿಯಲ್ಲಿ ದಮನಿತರ ಚಿಂತನಾ ಸಭೆ ನಡೆಸಿರುವ ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಛಲವಾದಿ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ, ನೆಹರು ಓಲೆಕಾರ್, ನಂಜುಂಡಸ್ವಾಮಿ, ವೈ.ಸಂಪಂಗಿ, ಮಹೇಂದ್ರ ಕೌತಾಳ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.

ಇನ್ನು, ಖರ್ಗೆಯವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಬಲಗೈ ಸಮುದಾಯ ಹೊರಗುಳಿಯಲಿದ್ದು, ಬಿಜೆಪಿಗೆ ಬಹುದೊಡ್ಡ ಬಲಗೈ ಸಮುದಾಯದ ಬೆಂಬಲವಿಲ್ಲ. ಎನ್.ಮಹೇಶ್, ಛಲವಾದಿ ನಾರಾಯಣಸ್ವಾಮಿ ಬಿಟ್ಟರೆ ಬೇರೆ ನಾಯಕರಿಲ್ಲ, ಕೇಂದ್ರ ಸಚಿವ ನಾರಾಯಸ್ವಾಮಿ,ಕಾರಜೋಳ ಎಡಗೈ ಸಮುದಾಯದವರು, ಬಲಗೈ ಸಮುದಾಯ ಬಲಿಷ್ಠಗೊಳಿಸದೇ ಹೋದರೆ ಪಕ್ಷಕ್ಕೆ ನಷ್ಟ ಉಂಟಾಗಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಹೀಗಾಗಿ ಚಲವಾದಿ ನಾರಾಯಣಸ್ವಾಮಿಗೆ ಉನ್ನತ ಸ್ಥಾನಮಾನ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES