ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ಸರ್ವ ಪಕ್ಷ ಸಭೆ ತೀರ್ಮಾನದಂತೆ ನಾಗಮೋಹನ್ ದಾಸ್ ಯಥಾವತ್ ಎಸ್ಸಿಗೆ ಶೇ 2, ಎಸ್ಟಿಗೆ ಶೇ 4 ಮೀಸಲಾತಿ ಹೆಚ್ಚಳ ಬಗ್ಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಮೀಸಲಾತಿ ಹೆಚ್ಚಳ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಮಾಧುಸ್ವಾಮಿ ಅವರು, ಎಜೆ ಸದಾಶಿವ ವರದಿಯನ್ನ ಕೋಟ್ ಮಾಡಿದ್ದಾರೆ. ಅದನ್ನ ಅವಲೋಕನ ಮಾಡಿ ಒಳ ಮೀಸಲಾತಿ ಬಗ್ಗೆ ವರದಿ ತಯಾರಿ ಮಾಡಲು ಚಿಂತನೆ ಮಾಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸದಾಶಿವ ಆಯೋಗ ಓದಿ ತೀರ್ಮಾನ ಮಾಡಿದ್ದೀವಿ, ಸರ್ಕಾರಿ ಆದೇಶವನ್ನ ತಕ್ಷಣವೇ ಜಾರಿ ಮಾಡ್ತೀವಿ ಎಂದರು.
ಈ ಬಗ್ಗೆ ಮತ್ತಷ್ಟು ಚರ್ಚೆ ಮಾಡಿ, ಒಟ್ಟು ಮೀಸಲಾತಿ ಎಷ್ಟು ಆಗುತ್ತದೆ ಅಂತಾ ನೋಡಬೇಕು. ಕೇಂದ್ರ ಸರ್ಕಾರ ಮೀಸಲಾತಿ ಮೇರೆಗೆ ನಾವು ಶೇ 60 ತಲುಪುತ್ತದೆ. ತಮಿಳುನಾಡು ಶೇ 69 ಮೀಸಲಾತಿ ನೀಡಿದೆ. ಆದ್ರೆ ಇನ್ನೂ ಅದು ಅಂತಿಮವಾಗಿಲ್ಲ. ಸುಪ್ರೀಂಕೋರ್ಟ್ ನಲ್ಲಿದೆ. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿರೋದ್ರಿಂದ ಚರ್ಚೆಗಳು ನಡೀತಾ ಇವೆ.
ಎಸ್ಸಿಗೆ ಶೇ. 15ರಿಂದ 17ಕ್ಕೇರಿಕೆ, ಎಸ್ಟಿಗೆ ಶೇ. 3ರಿಂದ 7 ಕ್ಕೆ ಮೀಸಲಾತಿ ಏರಿಕೆ ಮಾಡಲಾಗಿದೆ. ನ್ಯಾ. ನಾಗಮೋಹನ್ ದಾಸ್ ವರದಿ ಯಥಾವತ್ತು ಅಂಗೀಕಾರ ಮಾಡಲಾಗುತ್ತದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಿದ್ದೇವೆ. ಈ ಬಗ್ಗೆ ಇನ್ನು ಎರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಬೇರೆ ಸಮುದಾಯದ ಮೀಸಲಾತಿ ಬಗ್ಗೆ ಸಮಗ್ರ ಚರ್ಚೆ ಮಾಡುತ್ತೇವೆ.
ನಾವು ಮೀಸಲಾತಿ ಹೆಚ್ಚಿಗೆ ಮಾಡುತ್ತೇವೆ ಎಂದು ನೀಡಿದ್ವಿ ಅದರಂತೆ ತೀರ್ಮಾನ ಕೈಗೊಳ್ಳಲಾಗಿದೆ. ಬೇರೆ ಸಮುದಾಯಗಳನ್ನ ನಾವು ಪ್ರಚೋದನೆ ಮಾಡುತ್ತೀಲ್ಲ. ವೈಜ್ಞಾನಿಕ ಅವಲೋಕನ ಆಗದೇ ತೀರ್ಮಾನ ಮಾಡಲು ಆಗಲ್ಲ. ಎಸ್ಸಿ, ಎಸ್ಟಿ ವಿಚಾರದಲ್ಲಿ ಮೂರ್ನಾಲ್ಕು ಸಮಿತಿಗಳ ವರದಿ ಇದೆ. ನಾಗಮೋಹನ್ ದಾಸ್ ವರದಿಯಲ್ಲಿ ಒಳ ಮೀಸಲಾತಿ ಕೊಡಬೇಕು ಅಂತಾ ಹೇಳಿದ್ದಾರೆ. ಮುಂದಿನ ದಿನಗಳನ್ನ ಅದನ್ನೂ ಜಾರಿ ಮಾಡಲು ಸಿಎಂ ತೀರ್ಮಾನ ಮಾಡಲಿದ್ದಾರೆ.
ಯಾವ ಕೆಟಗರಿಗೂ ಮೀಸಲಾತಿ ಕಡಿಮೆ ಆಗಲ್ಲ. ನಾಗಮೋಹನ್ ದಾಸ್ ವರದಿಗೆ ಸೀಮಿತವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲವನ್ನೂ ಇಲ್ಲಿ ಚರ್ಚೆ ಮಾಡಕ್ಕಾಗಲ್ಲ. ಒಳ ಮೀಸಲಾತಿ ಹೇಗೆ ಜಾರಿ ಮಾಡಬೇಕು ಅಂತಾ ಸಭೆ ಮಾಡ್ತೀವಿ, ಕಾನೂನು ಸಚಿವರ ಸಮ್ಮುಖದಲ್ಲಿ ಕಮಿಟಿ ರಚನೆ ಮಾಡಿ ವರದಿ ಕೊಡಿ ಅಂತಾ ಸಿಎಂ ಹೇಳಿದ್ದಾರೆ. ಅದಕ್ಕೆ ಈ ಸಭೆ ನಡೆಸಿದ್ದೇವೆ ಎಂದರು.