Saturday, May 18, 2024

ನಮ್ಮ ಮಾತು ಸಚಿವರು ಕೇಳಿದ್ರೂ, ಅಧಿಕಾರಿಗಳು ಕೇಳುತ್ತಿಲ್ಲ; ಬಿಜೆಪಿ ಶಾಸಕ ಬೇಸರ

ಶಿವಮೊಗ್ಗ: ಜಿಲ್ಲೆಯಲ್ಲಿ ಅಧಿಕಾರಿಗಳು ನಮ್ಮ ಮಾತೇ ಕೇಳುತ್ತಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

ಪಂಚಾಯತ್ ರಾಜ್ ಇಲಾಖೆ ಪ್ರಕಾರ 280 ಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ನೀಡಿದೆ. ಆದರೆ, ಕಂದಾಯ ಇಲಾಖೆ ದಾಖಲೆಗಳಲ್ಲಿ 213 ಗ್ರಾಮಗಳಿಗೂ ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಎರಡೂ ಇಲಾಖೆಗಳಿಗೆ ಒಳಪಡದ ಮಜಲು ಗ್ರಾಮಗಳು, ದಾಖಲೆ ರಹಿತ ಗ್ರಾಮಗಳು 74 ಗ್ರಾಮಗಳು ಇವೆ. ಈ 74 ಗ್ರಾಮಗಳಿಗೆ ಈವರೆಗೂ ಯಾವುದೇ ಸೌಲಭ್ಯಗಳು ನೀಡಲಾಗಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಭಾಗದ 74 ಗ್ರಾಮಗಳು ಕಂದಾಯ ಗ್ರಾಮಗಳಾಗಿ ಬದಲಾವಣೆಯಾಗಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೂ ಈವರೆಗೂ ಈ ಗ್ರಾಮಸ್ಥರಿಗೆ ಯಾವುದೇ ಹಕ್ಕು ಪತ್ರ ನೀಡಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಹೇಳಲಾಗಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಅಶೋಕ್ ನಾಯ್ಕ್ ಹರಿಹಾಯ್ದರು.

ವಿಷಯವನ್ನು ಪ್ರಸ್ತಾಪ ನಾನು ಮಾಡಿದ್ದರೂ ಗುಲ್ಬರ್ಗ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಈ ಯೋಜನೆ ಮಾಡಲಾಗಿಲ್ಲ. ಕಂದಾಯ ಇಲಾಖೆ ಸಚಿವರು ನಮ್ಮ ಮಾತು ಕೇಳುತ್ತಿದ್ದಾರೆ. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಅಶೋಕ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES