Saturday, May 18, 2024

ಮಾರುಕಟ್ಟೆಗಳಲ್ಲಿ ದಸರಾ ಖರೀದಿ ಭರಾಟೆ ಜೋರು..!

ಬೆಂಗಳೂರು :  ಸಾಮಾನ್ಯವಾಗಿ ಹಬ್ಬದ ದಿನಗಳು ಹತ್ತಿರ ಬಂದ್ರೆ ಸಾಕು ಜನಸಾಮಾನ್ಯನ ಜೇಬಿಗೆ ಹೊರೆ ಬೀಳೋದು ಕಾಮನ್. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದ್ರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗೇ ಇರುತ್ತೆ. ಅದರಂತೆ ಈ ಬಾರಿಯ ಆಯುಧಪೂಜೆ, ದಸರಾಗೂ ದರ ಏರಿಕೆಯಾಗಿದ್ದು, ಹಬ್ಬದ ಮುನ್ನಾ ದಿನ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಕೂಡ ಜೋರಾಗಿ ನಡೆದಿದೆ.

ಈ ಬಾರಿ ಆಯುಧಪೂಜೆಗೆ ಇನ್ನು ಒಂದೇ ದಿನ ಮಾತ್ರ ಬಾಕಿ ಇರೋದು. ಸಾಮಾನ್ಯವಾಗಿ ಆಯುಧಪೂಜೆ ಸಂದರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆ ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೂವಿನ ದರ ಡಬಲ್ ಏರಿಕೆಯಾಗಿದೆ. ಆದರೆ, ವಿಶೇಷ ಅಂದರೆ ಹಣ್ಣು ಮತ್ತು ತರಕಾರಿ ದರ ತಟಸ್ಥವಾಗಿದ್ದು, ಹೂವಿನ ದರ ಕೈಸುಡುತ್ತಿದೆ.

ಇನ್ನು ಹೂವುಗಳ ಬೆಲೆ ನೋಡುವುದಾದರೆ..?

ಮಲ್ಲಿಗೆ 1000 ರೂ.
ಸೇವಂತಿಗೆ 300-500 ರೂ.
ಚೆಂಡು ಹೂ150 ರೂ.
ಕನಕಾಂಬರ 3000ರೂ.
ಸುಗಂಧರಾಜ 300 ರೂ.
ಕಾಕಡ 700-800 ರೂ.

ಇನ್ನು ಕೇವಲ ಹೂ ಮಾತ್ರ ಅಲ್ಲ. ಈ ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದ್ರೆ ಕುಂಬಳಕಾಯಿ. ಇದರ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂಗೆ ಏರಿಕೆ ಆಗಿದೆ. ಕಳೆದ ವಾರ 15 ರೂ.ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ. ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆ ಅಂತಾರೆ ವ್ಯಾಪಾರಿಗಳು.

ಒಟ್ಟಾರೆ ದಸರಾ ಹಬ್ಬಕ್ಕೆ ಈಗಾಗಲೇ ಎಲ್ಲವೂ ದುಬಾರಿಯಾಗಿದೆ.ಮಂಗಳವಾರ, ಬುಧವಾರ ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ.ಜನ ಬೆಲೆ ಏರಿಕೆಯ ಬಿಸಿಯಲ್ಲಿ ಈ ಬಾರಿ ದಸರಾ ಹಬ್ಬ ಮಾಡಬೇಕಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರಿಗೆ.

RELATED ARTICLES

Related Articles

TRENDING ARTICLES