Saturday, May 18, 2024

ಗಾಂಧೀಜಿ ಸ್ವತಂತ್ರ ಹೋರಾಟಕ್ಕೆ ಹೊಸ ಅಸ್ತ್ರವನ್ನು ಕೊಟ್ಟಿದ್ರು : ಸಿಎಂ ಬೊಮ್ಮಾಯಿ

ಬೆಂಗಳೂರು : ಮಹಾತ್ಮ ಗಾಂಧಿಯವರ ಇಡೀ ದೇಶಕ್ಕೆ ಪ್ರೇರಣೆ ಶಕ್ತಿ ನಾವೆಲ್ಲರೂ ಗೌರವ ಸಮರ್ಪಣೆ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮದಿನ ಇಂದು. ನಾವೆಲ್ಲರೂ ಗೌರವ ಸಮರ್ಪಣೆ ಮಾಡಿದ್ದೇವೆ. ಮಹಾತ್ಮ ಗಾಂಧಿಯವರ ಇಡೀ ದೇಶಕ್ಕೆ ಪ್ರೇರಣೆ ಶಕ್ತಿ. ಬದುಕಿನಲ್ಲಿ ಹತ್ತು ಹಲವು ಅಪಮಾನವನ್ನು ಅನುಭವಿಸಿದ್ರು. ಗಾಂಧೀಜಿ ಅವರು ಸ್ವತಂತ್ರ ಹೋರಾಟಕ್ಕೆ ಹೊಸ ಅಸ್ತ್ರವನ್ನು ಕೊಟ್ಟಿದ್ರು. ಗಾಂಧೀಜಿ ಹೇಳಿದಂತೆ ಸತ್ಯ ಅಹಿಂಸಾ ತತ್ವಗಳನ್ನು ಯಾವತ್ತೂ ಬಿಟ್ಟಿರಲಿಲ್ಲ. ಗ್ರಾಮಸ್ವರಾಜ್ ಎಂಬ ಘೋಷಣೆ ಕೆಳಹಂತದಲ್ಲಿ ಗ್ರಾಮ ಕಟ್ಟಲು ಸಹಾಯ ಆಗಿದೆ ಎಂದರು.

ಇನ್ನು, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ. ಗಾಂಧೀಜಿ ಹಾಗೂ ಶಾಸ್ತ್ರಿ ಸ್ವಾಮ್ಯಗಳು ಒಂದೇ ಇದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿಯಾಗಿ ಬಹಳಷ್ಟು ದಿನ ಇರಲಿಲ್ಲ. ಬಡತನದಿಂದ ಬಂದರು ತಮ್ಮ ಆದರ್ಶ ಬಿಟ್ಟುಕೊಟ್ಟಿರಲಿಲ್ಲ. ದೇಶವನ್ನು ಅತ್ಯಂತ ಸಾಮರ್ಥ್ಯವಾಗಿ ನಡೆಸಿದವರು. ದೇಶದಲ್ಲಿ ಆಹಾರದಲ್ಲಿ ಸ್ವಾವಲಂಬನೆ ಆಗಿರಲಿಲ್ಲ. ಜೈ ಜವಾನ್ ಜೈ ಕಿಶಾನ್ ಎಂಬ ಘೋಷಣೆ ಮಾಡಿದ್ದಾರೆ. ಹೀಗಾಗಿ ದೇಶ ಕಾಯುವ ಸೈನಿಕರು ಹಾಗೂ ರೈತರು ಬಗ್ಗೆ ಬಹಳ ಕಾಳಜಿ ವಹಿಸಿದ್ದರು ಎಂದರು.

RELATED ARTICLES

Related Articles

TRENDING ARTICLES