Saturday, May 18, 2024

ಖಾಕಿ ವಶಕ್ಕೆ 16 ಐಫೋನ್​​​

ಬೆಂಗಳೂರು : ಹೊಚ್ಚ ಹೊಸ ಐಫೋನ್ 14 ಪ್ರೊ-ಮ್ಯಾಕ್ಸ್ ಕಳ್ಳಸಾಗಣಿಕೆಗೆ ಯತ್ನಿಸಿದ ಪ್ರಯಾಣಿಕನೋರ್ವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.

ಸೆ. 29ರಂದು ಬ್ಯಾಂಕಾಕ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್​​ನ ವಾಯು ಗುಪ್ತಚರ ಘಟಕ (AIU) ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಐಪೋನ್​​ ಕಳ್ಳ ಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಯಿಂದ 16 ಹೊಚ್ಚ ಹೊಸ ಐಫೋನ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ಭಾರತದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್​ಗೆ 1 ಲಕ್ಷದ 50 ಸಾವಿರ ರೂ. ಬೆಲೆ ಇದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES