Tuesday, December 24, 2024

ಗಣೇಶ ಮೆರವಣಿಗೆ ವೇಳೆ ಚೂರಿ ಇರಿತವಾಗಿಲ್ಲ; ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ಹಾವೇರಿ; ಜಿಲ್ಲೆಯ ರಾಣೆಬೇನ್ನೂರು ನಗರದಲ್ಲಿ ಗಣೇಶ ವಿರ್ಸಜನೆಯ ವೇಳೆ ಚೂರಿ ಇರಿತದ ಘಟನೆ ನಡದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟನೆ ನೀಡಿದ್ದಾರೆ.

ಯುವಕರಿಗೆ ಚೂರಿ ಇರಿತವಾಗಿರುವ ಸುಳ್ಳು ವಿಡಿಯೋಗಳು ಹರಿದಾಡುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್​ಪಿ ಹನುಮಂತರಾಯ ಅವರು, ಚೂರಿ ಇರಿತದ ಯಾವುದೇ ವರದಿಯಾಗಿರುವದಿಲ್ಲ. ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ ಎಂದಿದ್ದಾರೆ.

ಚೂರಿ ಇರಿತದ ಬಗ್ಗೆ ಸುಳ್ಳು ವಿಡಿಯೋ ಹರಿದಾಡುತ್ತಿವೆ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಈ ವೇಳೆ ಎಸ್​ಪಿ ಸೂಚನೆ ನೀಡಿದ್ದಾರೆ.

ಹಾವೇರಿ ನಗರದ ಕಾಕಿಗಲ್ಲಿಯ ಗಣೇಶನ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಗುಂಪು ಘರ್ಷಣೆಯಾಗಿದ್ದು, ಆಗ ಚಾಕು ಇರಿತದ ವದಂತಿ ಹಬ್ಬಿಸಿರುವ ಕಾರಣಕ್ಕೆ ಗುಂಪುಘರ್ಷಣೆಗೆ ಕಾರಣ ಎನ್ನಲಾಗಿದೆ. ಮಾರಕಾಸ್ತಗಳಿಂದ ಹಲ್ಲೆ ಮಾಡಲಾಗಿದೆ ಎಂದು ಈ ಬಗ್ಗೆ ರಾಣೆಬೇನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES