Saturday, May 18, 2024

ಮಳೆ ಕಡಿಮೆಯಾಗ್ತಿದ್ದಂತೆ ಹೆಚ್ಚಾಯ್ತು ಡೆಂಘೀ ಕೇಸ್‌

ಬೆಂಗಳೂರು : ಕಳೆದ 20 ದಿನಗಳಿಂದ ನಿರಂತವಾಗಿ ಸುರಿಯುತ್ತಿದ್ದ ಮಳೆ ಪ್ರಮಾಣ ಇದೀಗ ಕಡಿಮೆಯಾಗಿದೆ. ಆದ್ರೆ ತುಗ್ಗು ಪ್ರದೇಶ, ಕೊಳಗೇರಿ, ಕೆರೆ, ರಾಜಕಾಲುವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ನೀರು ನಿಂತು ಅತಿ ಹೆಚ್ಚು ಸೊಳ್ಳೆಗಳ ಕಾಟ ಜಾಸ್ತಿಯಾಗಿವೆ. ಇದ್ರಿಂದ ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ. ಅದ್ರಲ್ಲೂ ಬಿಬಿಎಂಪಿಯ 243 ವಾರ್ಡ್‌ಗಳ ಪೈಕಿ 55 ವಾರ್ಡ್‌ಗಳು ಡೆಂಘೀ ಪ್ರಕರಣಗಳ ಹಾಟ್‌ಸ್ಪಾಟ್ ಆಗಿ ನಿರ್ಮಾಣಗೊಂಡಿವೆ.

ಪ್ರಮುಖವಾಗಿ ಕೋರಮಂಗಲ ಹಾಗೂ ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್‌ನಲ್ಲಿ ತಲಾ 4 ಪ್ರಕರಣ ಪ್ರತ್ತೆಯಾಗಿವೆ. ಇನ್ನು ಆರ್‌ಟಿನಗರ, ಪಟ್ಟಾಭಿರಾಮನಗರ, ಜಕ್ಕೂರು, ಅಟ್ಟೂರು ವಾರ್ಡ್‌ನಲ್ಲಿ ತಲಾ 3 ಪ್ರಕರಣ, ನ್ಯೂ ತಿಪ್ಪಸಂದ್ರ, ಬಸವನಗುಡಿ, ಚೌಡೇಶ್ವರಿ ವಾರ್ಡ್, ಸಂಜಯನಗರ, ಬಿಟಿಎಂ ಲೇಔಟ್, ಬೇಗೂರು, ನಂದಿನಿ ಲೇಔಟ್, ರಾಜ್‌ಮಹಲ್ ಗುಟ್ಟಹಳ್ಳಿ, ಮಲ್ಲೇಶ್ವರ, ಸಿವಿರಾಮನ್ ನಗರ, ಜಯನಗರ ಪೂರ್ವ, ಪ್ರಕಾಶ್‌ನಗರ, ರಾಧಾಕೃಷ್ಣ ದೇವಸ್ಥಾನ ವಾರ್ಡ್, ಬಸವೇಶ್ವರ ನಗರ, ಕಾಡು ಮಲ್ಲೇಶ್ವರ, ಮತ್ತಿಕೆರೆ, ಬೆಳ್ಳಂದೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಗಾಂಧಿನಗರದಲ್ಲಿ ತಲಾ 2 ಪ್ರಕರಣ ದೃಢಪಟ್ಟಿವೆ. ಕೆಂಪೇಗೌಡ ವಾರ್ಡ್, ಜಯನಗರ, ಗೊಟ್ಟಿಗೆರೆ, ಗಾಯತ್ರಿನಗರ ಸೇರಿದಂತೆ ಉಳಿದ ವಾರ್ಡ್‌ಗಳಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

ಇನ್ನು ಮುಂಗಾರು ಬಳಿಕ ಜನವರಿಯಿಂದ ಸೆ.15ರವರೆಗೆ ಒಟ್ಟು 1416 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಮುಂಗಾರು ಆರಂಭಗೊಂಡ ಜೂನ್‌ನಿಂದ ಈವರೆಗೆ 982 ಪ್ರಕರಣ ಪತ್ತೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ತಿಂಗಳಿನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಮತ್ತೆಯಾಗಿದೆ. ಆಗಸ್ಟ್ ನಲ್ಲಿ 176 ಪ್ರಕರಣ ಪತ್ತೆಯಾದ್ರೆ, ಸೆ.1 ರಿಂದ 15ರ ಅವಧಿಯಲ್ಲಿ 179 ಪ್ರಕರಣ ದೃಢಪಟ್ಟಿರುವುದು ಆತಂಕಕ್ಕೀಡು ಮಾಡಿದೆ. ಹೀಗಾಗಿ ಮಳೆಯಾದ ಬಳಿಕ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ. ನಿಯಂತ್ರಣಕ್ಕೆ ಈಗಾಗಲೇ ಬಿಬಿಎಂಪಿ ಆರೋಗ್ಯ ವಿಭಾಗದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೆರೆ ಉಂಟಾದ ಸ್ಥಳದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಅಂತ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದ್ರು

ಸದ್ಯ ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಾತಾವರಣವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸಹಕಾರಿ ಆಗಲಿದೆ. ಹೀಗಾಗಿ, ಪ್ರಕರಣಗಳ ಸಂಖ್ಯೆ ಇನ್ನಷ್ಟು ಅಧಿಕ ಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಮನೆ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.

RELATED ARTICLES

Related Articles

TRENDING ARTICLES