Saturday, May 18, 2024

ತಿಹಾರ್ ಜೈಲಿಗೆ ಹೋಗಿ ಬಂದವರೆಲ್ಲಾ ಭಗವದ್ಗೀತೆ ಹೇಳ್ತಿದ್ದಾರೆ.!

ಗದಗ: ಹೈದ್ರಾಬಾದ್ ನಲ್ಲಿ 40% ಕಮಿಷನ್ ಸರಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ನಾಮಫಲಕ ಪ್ರದರ್ಶಿಸಿ ಸಿಎಂ ಬೊಮ್ಮಾಯಿಗೆ ಅವಮಾನ ವಿಚಾರವಾಗಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂಗೆ ಅವಮಾನ ವಿರುದ್ಧ ನನಗೆ ಕೂಡ ಜನ್ರನ್ನ ಸೇರಿಸಿ ಪ್ರತಿಭಟನೆ ಮಾಡಿಸಲು ಬರುತ್ತದೆ, ಆದರೆ ನಾನು ಮಾಡಲ್ಲ. ಈಗಲೇ ಪ್ರತಿಭಟನೆ ಮಾಡಸೋಕೆ ತಾಕತ್ತು ನನಗೂ ಇದೆ ಎಂದು ಸಿಸಿ ಪಾಟೀಲ್​ ಹೇಳಿದರು.

ಭ್ರಷ್ಟಾಚಾರ ಎಸಗಿ ತಿಹಾರ್ ಜೈಲಿಗೆ ಹೋಗಿ ಬಂದವರು ಭಗವದ್ಗೀತೆ ಹೇಳ್ತಿದ್ದಾರೆ. ಭೂತದ ಕೈಯಲ್ಲಿ ಭಗವದ್ಗೀತೆ ಬರುತ್ತಿದೆ. ನಾಮಫಲಕ ಹಿಡಿದು ಪ್ರತಿಭಟನೆ ಮಾಡಿಸುವ ತಾಕತ್ತು ನನಗೂ ಇದೆ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ಸಿಸಿ ಪಾಟೀಲ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕರು ಜೊಲ್ಲು ಸುರಿಸ್ತಿದ್ದಾರೆ ಎಂಬ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜೊಲ್ಲು ಸುರಿಸುವ ರೂಢಿ ಇದ್ದವರೇ ಜೊಲ್ಲು ಸುರಿಸುವ ಬಗ್ಗೆ ಮಾತಾಡ್ತಾರೆ. ಬಾಯಿ ಚಪಲಕ್ಕೆ ಏನೆನೋ ಮಾತನಾಡಬಾರದು.

ಕಲ್ಬುರ್ಗಿ ಭಾಗದಲ್ಲಿ ಅಪ್ಪ ತಪ್ಪಿದ್ರೆ ಮಗ, ಮಗ ತಪ್ಪಿದ್ರೆ ಅಪ್ಪ ಆಡಳಿತ ನಡೆಸಿದ್ದಾರೆ. ಆ ಭಾಗದ ಹೆಸರೇ ಹಿಂದುಳಿದ ಕರ್ನಾಟಕ, ಆ ಭಾಗದಲ್ಲಿ ಇಷ್ಟು ವರ್ಷ ಆಳ್ವಿಕೆ ನಡೆಸಿದರು. ಆ ಭಾಗದಲ್ಲೇ ರಾಜಕಾರಣ ಮಾಡಿ ಅತ್ಯಂತ ಉನ್ನತ ಹುದ್ದೆ ಏರಿದರು. ಅಂತವರಿಂದಲೇ ಕಲ್ಯಾಣ ಕರ್ನಾಟಕ ಹಿಂದುಳಿಯಲು ಅವರೇ ಕಾರಣ ಎಂದು ಸಿಸಿ ಪಾಟೀಲ್ ಹೇಳಿದರು.

RELATED ARTICLES

Related Articles

TRENDING ARTICLES