Friday, May 17, 2024

ರೈಲಿನಿಂದ ಪವಾಡ ರೀತಿಯಲ್ಲಿ ಬದುಕುಳಿದ ಬಡಜೀವ

ಉತ್ತರ ಪ್ರದೇಶ: ಹಳಿ ದಾಟಿ ರೈಲು ಪ್ಲಾಟ್ ಫಾರ್ಮ್​ಗೆ ಹೋಗುವ ಮಧ್ಯೆ ಜಾರಿ ಬಿದ್ದು ಪವಾಡ ರೀತಿಯಲ್ಲಿ ವ್ಯಕ್ತಿಯೊಬ್ಬ ಬದುಕುಳಿದ ಘಟನೆ ಉತ್ತರ ಪ್ರದೇಶದ ಭರ್ತನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಭೋಲಾ ಸಿಂಗ್​ ಅಪಾಯದಿಂದ ಪಾರಾದ ವ್ಯಕ್ತಿ, ಆಗ್ರಾ ಫೋರ್ಟ್-ಲಕ್ನೋ ಜಂಕ್ಷನ್ ಇಂಟರ್‌ಸಿಟಿ ಸಂಪರ್ಕ ಮಾಡುವ ರೈಲು ಪ್ಲಾಟ್ ಫಾರ್ಮ್ ನಲ್ಲಿ ಈ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್ ಹತ್ತುವಾಗ ಇದ್ದಕ್ಕಿದ್ದಾಗೆ ರೈಲು ಬಂದಿದ್ದು, ಇದನ್ನ ಮನಗಂಡ ವ್ಯಕ್ತಿ ಹಳಿಯ ಪಕ್ಕದಲ್ಲಿ ಮಲಗಿ ತನ್ನ ಜೀವ ಉಳಿಸಿಕೊಂಡಿರುವುದನ್ನ ಕಾಣಬಹುದು.

ಪ್ಲಾಟ್ ಫಾರ್ಮ್ನಿಂದ ರೈಲು ಹೊರಟ ತಕ್ಷಣವೇ ಅಲ್ಲಿದ್ದ ಜನರು ಹಳಿ ಪಕ್ಕದಲ್ಲಿಯೇ ಮಲಗಿದ್ದ ವ್ಯಕ್ತಿಯನ್ನ ಮೇಲೆತ್ತಿದ್ದಾರೆ. ಈ ವೇಳೆ ಜಿವಂತವಾಗಿ ಪಾರಾದ ವ್ಯಕ್ತಿಗೆ ಯಾವುದೇ ಗಾಯವಾಗದಿರುವುದನ್ನ ಕಂಡು ಎಲ್ಲರೂ ಆಶ್ಚರ್ಯಚಕಿತರಾದರು.

RELATED ARTICLES

Related Articles

TRENDING ARTICLES