Wednesday, January 22, 2025

ಶಿವಾನಂದ ಸ್ಟೀಲ್ ಬ್ರಿಡ್ಜ್ ರಸ್ತೆ ಮತ್ತೆ ಕ್ಲೋಸ್..!

ಬೆಂಗಳೂರು : ಹೌದು ಬಹುನಿರೀಕ್ಷಿತ ಶಿವಾನಂದ ಸ್ಟೀಲ್ ಬ್ರಿಡ್ಜ್ ಇನ್ನೂ ಉದ್ಘಾಟನೆ ಕಂಡಿಲ್ಲ. ಸಧ್ಯ ಪ್ರಯೋಗಿಕ ಅಂತ ಸ್ವಾತಂತ್ರ್ಯ ದಿನಾಚರಣೆ ಗೆ ಅಂತ ಒಂದು ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ರು. ಇದ್ರಿಂದ ಜನ ವಾಹನದಲ್ಲಿ ಜುಮ್ ಅಂತಾ ಶಿವಾನಂದ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡ್ತಿದ್ರು. ಅಷ್ಟರಲ್ಲೇ ಮತ್ತೆ ಸ್ಟೀಲ್ ಬ್ರಿಡ್ಜ್ ಕ್ಲೋಸ್ ಆಗಿದೆ. ಟ್ರಾಫಿಕ್ ಸಮಸ್ಯೆಗೆ ಐದು ವರ್ಷದ ಬಳಿಕ ಸಿಕ್ತಪ್ಪ ಮಕ್ತಿ ಅಂತಾ ಖುಷಿ ಯಾಗಿದ್ದ ಜನ ಈಗ ಟ್ರಾಫಿಕ್ ಗೆ ಗುರ್ ಅನ್ನುವಂತಾಗಿದೆ.ಹೊಸ ಸ್ಟ್ರೀಲ್ ಬ್ರಿಡ್ಜ್‌ನಲ್ಲಿ ಸಿಕ್ಕಾಪಟ್ಟೆ ವೈಬ್ರೇಷನ್ ಆಗ್ತಿರೋದ್ರಿಂದ ಈಗ ಮತ್ತೆ ಕ್ಲೋಸ್ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ.ಇದ್ರಿಂದ ಮೂರೇ ದಿನಕ್ಕೆ ಮತ್ತೆ ಸ್ಟೀಲ್ ಬ್ರಿಡ್ಜ್ ಕ್ಲೋಸ್ ಮಾಡಿರೋದಕ್ಕೆ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ಪ್ಲೈ ಓವರ್‌ನಲ್ಲಿ ಓಡಾಡಿದ್ರೆ ವೈಬ್ರೇಷನ್ ಅನುಭವ ಹೆಚ್ಚಾಗಿದೆ ಅಂತಾ ಜನ ಗರಂ ಆಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್‌ರನ್ನು ಕೇಳಿದ್ರೆ.ಮೊನ್ನೆ ಪ್ರಾಯೋಗಿಕವಾಗಿ ಅನುವು ಮಾಡಿಕೊಟ್ಟಿದ್ದೇವೆ. ಕೊಂಚ ವೈಬ್ರೇಷನ್ ಇದೆ. ಇದು ಮಾಮೂಲಿ. ಹೀಗಾಗಿ 40 ಟನ್ ವಾಹನ ಬಿಟ್ಟು ಟೆಸ್ಟ್ ಮಾಡಿ ಕ್ಯೂರಿಂಗ್ ಮಾಡ್ತೀವಿ ಅಂತಾ ಹೇಳಿದ್ದಾರೆ.

ಸದ್ಯ ಶಿವಾನಂದ ಸ್ಟೀಲ್ ಬ್ರಿಡ್ಜ್ ಪ್ರಾರಂಭದಲ್ಲಿ 19 ಕೋಟಿ ಇದ್ದ ಪ್ರಾಜೆಕ್ಟ್ 5 ವರ್ಷಕ್ಕೆ 40 ಕೋಟಿಗೆ ಹೆಚ್ಚಾಯ್ತು. ಆದ್ರೆ, ಫ್ಲೈ ಓವರ್ ಗುಣಮಟ್ಟ ಮಾತ್ರ ಬದಲಾಗಿಲ್ಲ. ಬಿಬಿಎಂಪಿ ಅದ್ಯಾವ ಕೆಲ್ಸ ನೆಟ್ಟಗೆ ಮಾಡುತ್ತೆ. ಜನ ಯಾವಾಗ ನೆಮ್ಮದಿಯಾಗಿ ಇರ್ತಾರೆ ಅನ್ನೋ ನೂರಾರು ಪ್ರಶ್ನೆಗಳು ಕಾಡ್ತಿವೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES