Monday, December 23, 2024

ಈದ್ಗಾ ಮೈದಾನದಲ್ಲೇ ವಿಘ್ನೇಶ್ವರನ ಉತ್ಸವ ಆಗುತ್ತಾ..?

ಹುಬ್ಬಳ್ಳಿ : ಒಂದು ಕಡೆ ಗಣೇಶೋತ್ಸವ ಮಂಡಳಿ, ಶ್ರೀರಾಮ ಸೇನೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಈ ವರ್ಷ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಆದರೆ, ಪಾಲಿಕೆ ಮಾತ್ರ ಆಚರಣೆಗೆ ಪರ್ಮಿಶನ್ ಕೊಡದೆ ಜಾಣನಡೆ ಅನುಸರಿಸುತ್ತಿದೆ. ಇದಕ್ಕೆ ರೊಚ್ಚಿಗೆದ್ದ ಗಜಾನನ ಮಂಡಳಿ ಮತ್ತು ಕನ್ನಡಪರ ಸಂಘಟನೆಗಳು ನಗರದ ದುರ್ಗದ ಬೈಲ್ ನಿಂದ ಪಾಲಿಕೆ ಕಚೇರಿವರೆಗೆ, ರ್ಯಾಲಿ ನಡೆ ಮಾಡಿದರು, ಅಲ್ಲದೆ ಸಾರ್ವಜನಿಕರ ಒಪ್ಪಿಗೆ ಸಹಿ ಪಡೆದುಕೊಂಡು ಅನುಮತಿಗಾಗಿ ಪಾಲಿಕೆಗೆ ಮುತ್ತಿಗೆ ಹಾಕಿದರು. ಆದ್ರೂ ಕೂಡ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿಯನ್ನು ನೀಡದಿದ್ದರೆ ಇದೇ 25 ರಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.

ಇನ್ನು ಗಜಾನನ ಮಹಾ ಮಂಡಳಿ ಸದಸ್ಯರು, ಈದ್ಗಾ ಮೈದಾನದಲ್ಲಿ ವಿಘ್ನೇಶ್ವರನ ಉತ್ಸವ ಮಾಡಲು ಅನುಮತಿಗಾಗಿ ಇಲಾಖೆಗಳಿಗೆ ಹೇಗೆಲ್ಲಾ ಅಲೆದಾಡಿದ್ದಾರೆ ಎಂಬುದರ ಅಣುಕು ಪ್ರದರ್ಶನ ಕೂಡ ಮಾಡಿದರು. ಅಷ್ಟೇ ಅಲ್ಲದೆ, ಸಾರ್ವಜನಿಕರ ಸಹಿ ಸಂಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿದ್ದಾರೆ.

ಒಟ್ನಲ್ಲಿ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವ ಮಾಡಲು ಪಣ ತೊಟ್ಟಿರುವ ಗಜಾನನ ಮಂಡಳಿ ಹಾಗೂ ಕೆಲ ಸಂಘಟನೆಗಳಿಗೆ ಸಿಹಿ ಸಿಗುತ್ತಾ ಕಾದು ನೋಡಬೇಕಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES